Mankutimmana Kagga by D.V. Gundappa
ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? । ಸಲಿಸದೊಂದನುಮೊಂದನುಂ ದೈವ ಬಿಡದು ॥ ಹೊಲಸೆಲ್ಲವೆಲ್ಲ ಪಾಳ್, ಬಾಳ್ಗೆ ತಳಹದಿಯಿಲ್ಲ । ಗಲಿಬಿಲಿಯಿದೆನಬೇಡ - ಮಂಕುತಿಮ್ಮ ॥ ೫೮೫ ॥
phalavEnu heNagADi hOrADi dhareyoLage? । salisadu ondanum ondanum daiva biDadu ॥ holasellavu ellavu pAL, bALge taLahadi illa । galibiliyidu enabEDa - Mankutimma ॥ 585 ॥
ಆ ದೈವ ತಾನು ನಮ್ಮಿಂದ ಏನನ್ನು ಮಾಡಿಸಬೇಕೆಂದಿದೆಯೋ ಅದನ್ನು ಮಾಡಿಸದೆ ಬಿಡದು, ನಾವು ‘ ನಾನು ‘ ಮಾಡುತ್ತೇನೆ ಎಂದು ಎಷ್ಟು ಹೋರಾಡಿ, ಹೆಣಗಾಡಿದರೂ ಏನೂ ಪ್ರಯೋಜನವಿಲ್ಲ. ಹಾಗಿರುವಾಗ ನಮ್ಮ ಮತ್ತು ಈ ದೈವ ಅಥವಾ ವಿಧಿಯ ನಡುವಿನ ಹೋರಾಟದಲ್ಲಿ ಸೋತು, ಒಂದು ಅಯೋಮಯ ಸ್ಥಿತಿಯಲ್ಲಿ " ಛೆ! ಈ ಬದುಕಿನಲ್ಲಿ ನಾವಂದುಕೊಂಡದ್ದನ್ನು ಮಾಡಲಾಗುವುದೇ ಇಲ್ಲ. ಈ ಬಾಳಿಗೆ ತಳಹದಿಯಿಲ್ಲ, ಈ ಬಾಳೆಲ್ಲ ಹೊಲಸು" ಎಂದು ಹೇಳಬೇಡ ಎಂದು ನಮ್ಮ ಬದುಕು ಮತ್ತು ದೈವದ ನಡುವಿನ ಸಮನ್ವಯದ ಅವಶ್ಯಕತೆಯನ್ನು ಸೂಚಿಸಿದ್ದಾರೆ ನಮಗೆ ಈ ಮುಕ್ತಕದಲ್ಲಿ.
Don't entertain such thoughts. What is the use of struggling so much? Why should I fight so much in this world? Any way providence is not going to make it easier for me. Neither will it let go of anything I owe. The whole world is bad. There is a no solid foundation on which life is built (to rely on). The whole thing is nothing but colossal confusion. - Mankutimma
Video Coming Soon
Detailed video explanations by scholars and experts will be available soon.