Back to List

Kagga 584 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ । ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ॥ ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು। ಒಲ್ಲನವನ್ ಅರೆನಚ್ಚ - ಮಂಕುತಿಮ್ಮ ॥ ೫೮೪ ॥

ellakam ninagilla kartavyada adhikAra । illadeyum illa ninagA horeya pAlu ॥ sallisu Adanita, mikkudu pAligana pADu । ollan avan arenachcha - Mankutimma ॥ 584 ॥

Meaning in Kannada

ಜಗತ್ತಿನ ಎಲ್ಲ ಕೆಲಸದ ಹೊರೆಯನ್ನು ಹೊರುವ ಅಧಿಕಾರ ನಿನಗಿಲ್ಲ. ಆದರೆ ನಿನಗೆ ಹೊರೆಯೇ ಇಲ್ಲವೆಂದಲ್ಲ!!!! ನೀನು ಮಾಡಲೇ ಬೇಕಾದ ಕರ್ತವ್ಯದ ಹೊರೆ ನಿನಗಿದೆ. ನಿನ್ನ ಕೈಲಾದಷ್ಟನ್ನು ನಿಷ್ಠೆಯಿಂದ ಮಾಡು ಮತ್ತು ಮಿಕ್ಕದ್ದನ್ನು ನಿನ್ನನ್ನು ಪಾಲಿಸುವ ಆ ದೈವದಲ್ಲಿ ದೃಢ ನಂಬಿಕೆ ಇಟ್ಟು ಬಿಟ್ಟುಬಿಡು. ನಂಬಿಕೆ ಪೂರ್ಣವಾಗಿರಲಿ. ಏಕೆಂದರೆ ಅವನು ಅರೆಬರೆ ನಂಬಿಕೆಯನ್ನು ಒಪ್ಪುವುದಿಲ್ಲ.

Meaning & Interpretation

The creator has not given you the responsibility to run the entire world. He has however given you your set of duties. There is no escaping from that. Perform as many duties as possible and let the rest to be dealt by Him. He will not like a person who believes in Him partially (conditionally). - Mankutimma

Themes

LifePeaceDuty

Video Section

Video Coming Soon

Detailed video explanations by scholars and experts will be available soon.