Back to List

Kagga 583 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು?। ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ॥ ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ । ಎಷ್ಟಾದರಷ್ಟೆ ಸರಿ - ಮಂಕುತಿಮ್ಮ ॥ ೫೮೩ ॥

aShTadiggajeve nIn? AdishEShane nInu? । kaShTabhAravu idendu niTTusira biDuve! ॥ niShTurada ninna kanikara jagake bEkilla । eShTAdare aShTe sari - Mankutimma ॥ 583 ॥

Meaning in Kannada

ಬದುಕಿನ ಬವಣೆಯನ್ನು ಪಡುವಾಗ " ಅಯ್ಯೋ ಇದು ಕಷ್ಟ ಮತ್ತು ಇದು ಭಾರ" ಎಂದು ನಿಟ್ಟುಸಿರು ಬಿಡುವೆಯಲ್ಲಾ, ನೀನೇನು ಎಂಟು ದಿಕ್ಕುಗಳನ್ನು ಹೊತ್ತ ಆನೆಗಳಷ್ಟು ಭಾರವನ್ನೂ ಹೊತ್ತಿಲ್ಲ ಅಥವಾ ಆ ಆನೆಗಳನ್ನು ಹೊತ್ತ ಆದಿಶೇಷನಷ್ಟು ಭಾರವನ್ನೂ ಹೊತ್ತಿಲ್ಲವಲ್ಲ. ಸುಮ್ಮನೆ " ನಾನು ಬಹಳ ಕಷ್ಟಪಡುತ್ತಿದ್ದೇನೆ " ಎನ್ನುತ್ತಾ ಅನ್ಯರ ಅನುಕಂಪವನ್ನು ಆಕರ್ಷಿಸುವ ನಿನ್ನನ್ನು ಯಾರೂ ಈ ಜಗತ್ತಿನಲ್ಲಿ ಗಮನಿಸುವುದಿಲ್ಲ. ನಿನಗೆ ಎಷ್ಟು ಹೊರಲಾದರೆ ಅಷ್ಟು ಹೊತ್ತುಕೋ. ಸುಮ್ಮನೆ ಅಲವತ್ತುಕೊಳ್ಳಬೇಡ ಎಂದು ಕಿವಿಮಾತನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Are you one of the Gods that is in charge of an expanse of the universe (one of eight directions)? Are you the Adi Shesha who is holding up the universe on his shoulders? Then why are you complaining that your load is too much? No one in this world needs to hear you and feel pity. Everyone has their own burden to bear. What ever order is present in this world is just fine. - Mankutimma

Themes

DevotionLifeNature

Video Section

Video Coming Soon

Detailed video explanations by scholars and experts will be available soon.