Mankutimmana Kagga by D.V. Gundappa
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ । ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ॥ ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು?। ಒರಟು ಕೆಲಸವೊ ಬದುಕು - ಮಂಕುತಿಮ್ಮ ॥ ೫೮೨ ॥
sariyAgalillavadu sariyidallavenutta । haraDikoLabEDa muLLanu hAsigeyali ॥ kore AdoDe En ondu? neredoDEn innondu? । oraTu kelasavo baduku - Mankutimma ॥ 582 ॥
ಬದುಕಿನಲ್ಲಿ ಮಾಡಿದ ಕೆಲಸ ಸರಿಯಾಗಲಿಲ್ಲ ಎಂದೋ ಅಥವಾ ಸಿಕ್ಕದ್ದು ಸರಿಯಿಲ್ಲ ಎಂದೋ ಕೊರಗುತ್ತಾ, ಬದುಕಿನ ಹಾಸಿಗೆಯಲ್ಲಿ ಮುಳ್ಳನ್ನು ಹರಡಿಕೊಳ್ಳಬೇಡ. ಯಾವುದೇ ಒಂದು ಕಡಿಮೆಯಾದರೂ ಅಥವಾ ಹೆಚ್ಚಾದರೂ ಏನೂ ವ್ಯತ್ಯಾಸವಾಗುವುದಿಲ್ಲ. ಆದರೂ ಇದನ್ನೇ ಕುರಿತು ತಲೆ ಕೆಡಿಸಿಕೊಂಡು ಬದುಕುವುದು ಒಂದು ಒರಟು ಕೆಲಸ ಎಂದು ಬದುಕಿನ ಪರಿಯ ಮತ್ತೊಂದು ಆಯಾಮವನ್ನು ನಮಗೆ ತೋರುತ್ತಾ ಶಾಂತಿಯ ಮತ್ತು ನೆಮ್ಮದಿಯ ಬದುಕಿಗೆ ಒಂದು ದಾರಿಯನ್ನೂ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If you keep cribbing - this is not right, that is not right; it is same as spreading a layer of thorns on your bed. Can you sleep peacefully? What is wrong is something in this world is slightly crooked? Or something is bigger than its ideal size? Life is a giant approximation. Just get used to it. - Mankutimma
Video Coming Soon
Detailed video explanations by scholars and experts will be available soon.