Back to List

Kagga 581 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೇವರದಿದೆಲ್ಲ ದೇವರಿಗೆಲ್ಲವೆಂದೊರಲು-। ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ॥ ದಾವನ್ತ ಬಡುತ ತನ್ನಿಚ್ಛೆಯನೆ ಘೋಷಿಸುವ । ಭಾವವೆಂತಹ ಭಕುತಿ? - ಮಂಕುತಿಮ್ಮ ॥ ೫೮೧ ॥

dEvaradidella dEvarige ella endu oraluta। Avudanum avana nirNayake biDadeye tAM ॥ dAvanta baDuta tanna icCheyane ghOShisuva । bhAvaventaha bhakuti? - Mankutimma ॥ 581 ॥

Meaning in Kannada

ಈ ಜಗತ್ತೆಲ್ಲವೂ ಆ ದೇವರದು ಮತ್ತು ಇಲ್ಲಿರುವುದೆಲ್ಲವೂ ಆ ದೇವರಿಗಾಗಿಯೇ ಇದೆ ಎಂದು ವಟಗುಟ್ಟುತ್ತಾ ಯಾವುದನ್ನೂ ಅವನ ನಿರ್ಣಯಕ್ಕೆ ಬಿಡದೆ, ತಾನೇ ಎಲ್ಲದಕ್ಕೂ ದಾವಂತಪಡುತ್ತಾ, ತನ್ನದೇ ಆದ ನಿರ್ಣಯಗಳನ್ನು ಸದಾಕಾಲ ಘೋಷಿಸುತ್ತಾ ಇರುವುದು ಯಾವ ರೀತಿಯ ಭಕ್ತಿ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

What kind of devotion is this? You say everything belongs to God. All things exist only for Him. Yes, you don't want to leave any matter entirely up to Him. You get restless when ever His decision is even slightly different than yours. - Mankutimma

Themes

DevotionSufferingDetachmentPeace

Video Section

Video Coming Soon

Detailed video explanations by scholars and experts will be available soon.