Mankutimmana Kagga by D.V. Gundappa
ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? । ತಿರುಕಹಾರುವನಾಗಿ ಮೀಸೆ ತಿರಿಚುವೆಯ? ॥ ಇರುವುದವನವನಿಗವನವನ ತಾಣದ ಧರ್ಮ । ಅರಿವೆ ಋತುಗತಿಯಂತೆ - ಮಂಕುತಿಮ್ಮ ॥ ೫೮೦ ॥
doreya vEShava dharisi mareyuveya mIseyanu? । tiruka hAruvanu Agi mIse tirichuveya? ॥ iruvudu avanavanige avanavana tANada dharma । arive Rutugatiyante - Mankutimma ॥ 580 ॥
ನಾಟಕದಲ್ಲಿ ರಾಜನ ಪಾತ್ರ ಧರಿಸಿ ಮೀಸೆಯನ್ನು ಮರೆಯಬಹುದೇ? ಭಿಕ್ಷಾರ್ಥಿಯಾದ ಬಡ ಬ್ರಾಹ್ಮಣನ ವೇಷ ಧರಿಸಿದಪ್ಪ ದಪ್ಪ ಮೀಸೆಯನ್ನು ಇಟ್ಟುಕೊಂಡರೆ ಬಿಕ್ಷೆ ಸಿಕ್ಕೀತೆ?. ಜಗತ್ತಿನಲ್ಲಿರುವ ಪ್ರತಿಯೊಬ್ಬನಿಗೂ ಅವನವನದೇ ಆದಂತ ಒಂದು ಪಾತ್ರವಿರುತ್ತದೆ ಮತ್ತು ಆ ಪಾತ್ರಕ್ಕೊಂದು ಧರ್ಮವಿರುತ್ತದೆ. ಋತು ಬದಲಾದಂತೆ ನಮ್ಮ ಉಡುಗೆ ತೊಡುಗೆಗಳೂ ಬದಲಾಗುವುದಿಲ್ಲವೇ? ಹಾಗೆ ಸಮಯ ಸಂಧರ್ಭದ ಔಚಿತ್ಯಕ್ಕನುಸಾರವಾಗಿ ನಮ್ಮ ವೇಷ, ನಡೆ ನುಡಿ ಇರಬೇಕು ಎನ್ನವುದೇ ಈ ಮುಕ್ತಕದ ಹೂರಣ
One can not wear the costumes of a king and forget the manly moustache. One can not also flaunt a moustache when he is playing the part of a beggar or a brahmin. Everybody in this world has a role to play. We have to act according to our role as actors in a play. Just like we change clothes based on seasons, we should change based on our roles. - Mankutimma
Video Coming Soon
Detailed video explanations by scholars and experts will be available soon.