Back to List

Kagga 579 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೆನ್ನಿನಗಲವನಳೆದು ಹೊರಗೆ ನೀನದನೊಡ್ಡು । ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು ॥ ಬನ್ನ ನಿನಗೊದಗಲದನಾತ್ಮ ಶಿಕ್ಷಣವೆನ್ನು । ಮಾನ್ಯದೊಪ್ಪಂದವಿದು - ಮಂಕುತಿಮ್ಮ ॥ ೫೭೯ ॥

bennina agalavanu aLedu horage nInadanoDDu । tannadenuvudanu vidhi tAne koLali biDu ॥ banna ninagodagalu adanu Atma shikShaNavennu । mAnyada oppandavidu - Mankutimma ॥ 579 ॥

Meaning in Kannada

ಬದುಕಿನಲ್ಲಿ ಜೀವನದ ದೈನಂದಿನ ಕಾರ್ಯಕೆಲಸಗಳಲ್ಲಿ, ಎಷ್ಟು ಭಾರವನ್ನು ನಿನಗೆ ಹೊರಲು ಆಗುವುದೋ, ಅಷ್ಟನ್ನು ಮಾತ್ರ ಹೊತ್ತುಕೋ!! ನಿನ್ನ ಪೂರ್ವ ಕರ್ಮದನುಸಾರ ನಿನ್ನಿಂದ ಏನೇನು ಆಗಬೇಕೋ ಅದನ್ನೆಲ್ಲ ಆ ವಿಧಿ ಮಾಡಿಸಿಕೊಳ್ಳಲಿ ಬಿಡು. ಹಾಗೆ ಕರ್ಮ ಮಾಡುವಾಗ ಭಂಗವುಂಟಾದರೆ ಅದನ್ನು ಬದುಕಿನಲ್ಲಿ ನಿನಗೆ ಸಿಗುವ ಶಿಕ್ಷಣವೆಂದು ತಿಳಿ. ಅದೇ ಸರಿಯಾದ ಒಡಂಬಡಿಕೆ(compromise) ಎಂದು ಬದುಕನ್ನು ಬದುಕುವ ಮತ್ತೊಂದು ಪರಿಯನ್ನು ಉಪದೇಶಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

You must know your strengths (the size of your back) and endure the weight that fate puts on it. You must leave it to providence to remove some of your burden or put more. If you falter while carrying the weight around, then treat each one as a learning for the soul. It is a fair deal. - Mankutimma

Themes

DeathFateDetachment

Video Section

Video Coming Soon

Detailed video explanations by scholars and experts will be available soon.