Back to List

Kagga 578 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೆಟ್ಟಕ್ಕೆ ಸನ್ನೆಹಾಕಿರುವ ಮಹದಾಶಿಗನೆ । ಗಟ್ಟಿಯೇ? ಸೊಟ್ಟಾಗದೇ ಸನ್ನೆಗೋಲು? ॥ ರಟ್ಟೆಯೇ ಮುರಿದೀತು ಮೈಮರೆತ ಸಾಹಸದಿ । ಎಷ್ಟುಚಿತವೋ ನೋಡು - ಮಂಕುತಿಮ್ಮ ॥ ೫೭೮ ॥

beTTakke sannehAkiruva mahadAshigane । gaTTiyE? soTTAgadE sannegOlu ॥ raTTeyE muridItu maimareta sAhasadi । eSTu uchitavO nODu - Mankutimma ॥ 578 ॥

Meaning in Kannada

ಬೆಟ್ಟವನ್ನೇ ಎತ್ತಿಡಲು ಸನ್ನೆ ಕೋಲನ್ನು ಹಾಕಿರುವ, ಹೇ! ಅತಿ ಸಾಹಸಿಯೇ, ಮೊದಲು ನಿನ್ನ ಸನ್ನೆ ಕೋಲು ಗಟ್ಟಿಯೇ ಎಂದು ನೋಡಿಕೋ, ಇಲ್ಲದಿದ್ದರೆ ಅದು ಬೆಟ್ಟದ ಭಾರದಿ ಸೊಟ್ಟಗಾಗುವುದು. ಬೆಟ್ಟ ಮತ್ತು ಕೋಲು ಎರಡೂ ಗಟ್ಟಿಯಾಗಿದ್ದರೆ ಮೈಮರೆತ ಅತಿ ಸಾಹಸದಿ ನಿನ್ನ ಬುಜವೇ ಮುರಿದೀತು. ಹಾಗಾಗಿ ನಿನ್ನ ಶಕ್ತಿಯ ಔಚಿತ್ಯವನ್ನು ನೋಡಿಕೊಂಡು ಕೆಲಸವನ್ನು ಮಾಡು ಎಂದು ನಮಗೆ ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

Those who are aiming to move the mountain, please listen up. Is it achievable? Will the rod (to be used with the fulcrum) itself not get bent? If not, you may break your arm while being immersed in your efforts. Please take a break and think what you are aiming for is just. - Mankutimma

Themes

Self

Video Section

Video Coming Soon

Detailed video explanations by scholars and experts will be available soon.