Mankutimmana Kagga by D.V. Gundappa
ಕಿಡಿ ಸಣ್ಣದನು ಮೇಲೆಬಿದ್ದ ಕೊರಡಾರಿಪುದು । ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳ ॥ ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗಲಸಗಳನು । ತೊಡಗಾತ್ಮ ಬಲಿತಂದು - ಮಂಕುತಿಮ್ಮ ॥ ೫೭೭ ॥
kiDi saNNadanu mElebidda koraDAripudu । suDuvudA kiDiyuriye nUru koraDugaLa ॥ uDugi ninnAtmavire biDu heggelasagaLanu । toDagAtma balitandu - Mankutimma ॥ 577 ॥
ಒಂದು ಸಣ್ಣ ಬೆಂಕಿಯ ಕಿಡಿಯ ಮೇಲೆ ಮರದ ಒಂದು ದಪ್ಪ ತುಂಡು ಬಿದ್ದರೆ ಆ ಬೆಂಕಿಯ ಕಿಡಿ ಆರಿಹೊಗುತ್ತದೆ. ಆದರೆ ಆ ಕಿಡಿ ಆರದೆ ಹಾಗೆ ಉರಿದರೆ ಅಂತಹ ನೂರಾರು ಮರದ ತುಂಡುಗಳನ್ನು ಸುಟ್ಟು ಕರಕಲಾಗಿಸುವ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ನಿನ್ನ ಆತ್ಮ ಶಕ್ತಿ, ಧೈರ್ಯ ಎಲ್ಲವೂ ಅಡಗಿರುವಾಗ ಸುಮ್ಮನಿರು ಮತ್ತು ನಿನಗೆ ಶಕ್ತಿ ಬಲವಂದು ಆತ್ಮ ಸ್ಥೈರ್ಯ ಕೂಡಿದಾಗ, ಬೃಹತ್ಕಾರ್ಯಗಳನ್ನು ಕೈಗೊಳ್ಳು ಎಂದು ಒಂದು ವಿವೇಚನೆಯ ಮಾತನ್ನು ನಮಗೆ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
When a log falls over a spark, it kills the spark. But if the same spark grows into a fire, it consumes hundreds of such logs. The spark has the potential to grow big. When such talent is still nascent in you, you should not undertake huge tasks. You should wait until the talent in you ripens and gets stronger before you take on a mighty opponent. - Mankutimma
Video Coming Soon
Detailed video explanations by scholars and experts will be available soon.