Mankutimmana Kagga by D.V. Gundappa
ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು । ಸನ್ನಿವೇಶದ ಸೂಕ್ಷ್ಮವರಿತು, ಧೃತಿದಳೆದು ॥ ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ । ಪುಣ್ಯಶಾಲಿಯ ಪಾಡು - ಮಂಕುತಿಮ್ಮ ॥ ೫೭೬ ॥
tanna shaktiyanaLedu, tanna guNagaLa bagedu । sannivEshada sUkShmavaritu, dhRutidaLedu ॥ tanna kartavyaparidhiya mIrade ujjugise । puNyashAliya pADu - Mankutimma ॥ 576 ॥
ಒಬ್ಬ ವ್ಯಕ್ತಿ, ತನ್ನ ಗುಣಾವಗುಣಗಳಿಂದ ಕೂಡಿದ ”ಶಕ್ತಿ’ ಯನ್ನು ಅರಿತು, ಅವುಗಳಲ್ಲಿ ಗುಣಗಳನ್ನು ಮಾತ್ರ ತೋಡಿ ಹೊರತೆಗೆದು, ಸಮಯ ಸಂಧರ್ಭಗಳ ಸೂಕ್ಷ್ಮವನ್ನು ಅರಿತು. ತನ್ನ ಕಾರ್ಯವ್ಯಾಪ್ತಿಯನ್ನರಿತು, ಅದರ ಪರಿಧಿಯನ್ನು ಮೀರದೆ ತನ್ನ ಕರ್ತವ್ಯವನ್ನು ಮಾಡುವುದು ಪುಣ್ಯಶಾಲಿಯ ಪಾಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹಾಗೆ ಕಾರ್ಯಪ್ರವೃತ್ತನಾಗಲಾದರೆ ಅಂತಹವನೇ ಪುಣ್ಯಶಾಲಿ ಎನ್ನುವುದೇ ಈ ಮುಕ್ತಕದ ಹೂರಣ.
Fortunate is a person who can do all these - know his strength, introspect critically his qualities, understand the subtleties of the situation, exhibit courage, act with in the perimeter of his powers (and duty) and still get the work done. - Mankutimma
Video Coming Soon
Detailed video explanations by scholars and experts will be available soon.