Mankutimmana Kagga by D.V. Gundappa
ಕಕ್ಷಿಗಾರನವೊಲೇ ಪೋರುತ್ತೆ ನ್ಯಾಯಕ್ಕೆ । ಸಾಕ್ಷಿವೊಲಿರು ಕಡೆಗೆ ತೀರ್ಪಾಗುವಂದು ॥ ಭಿಕ್ಷುವೊಲು ಕಾಲ ಸವೆಯಿಸಿ ಲೋಕಯಾತ್ರೆಯಲಿ । ಪಕ್ಷಿವೊಲು ಮನದೊಳಿರು - ಮಂಕುತಿಮ್ಮ ॥ ೫೭೫ ॥
kakShigArana volE pOrutte nyAyakke । sAkShiyavol iru kaDege tIrpAguvandu ॥ bhikShuvolu kAla saveyisi lOkayAtreyali । pakShivolu manadoLiru - Mankutimma ॥ 575 ॥
ನ್ಯಾಯಾಲಯವನ್ನು ನ್ಯಾಯಕ್ಕಾಗಿ ಹತ್ತಿ ನ್ಯಾಯ ಸಿಕ್ಕುವವರೆಗೆ ಪ್ರತಿನಿತ್ಯ ಹೋರಾಡುವವನಂತೆ ನೀನೂ ಸಹ ಬದುಕಿನಲ್ಲಿ ಹೋರಾಡು. ಆದರೆ ಸಾಕ್ಷಿ ಹೇಳುವವನು ನ್ಯಾಯದ ತೀರ್ಪಿನಿಂದ ವಿಚಲಿತನಾಗುವುದಿರುವಂತೆ, ಬದುಕಿನಲ್ಲಿ ನಿರ್ಲಿಪ್ತನಾಗಿ ಸಾಕ್ಷಿಯಂತೆ ಇರು. ಬೌದ್ಧ ಬಿಕ್ಷು ಕಾಲನಡಿಗೆಯಲ್ಲೇ ಲೋಕಯಾತ್ರೆಮಾಡುವಂತೆ, ಮುಕ್ತವಾಗಿ ಆಗಸದಲ್ಲಿ ಹಾರಾಡುವ ಪಕ್ಷಿಯಂತೆ ನಾವೂ ಸಹ ಬದುಕಿನಲ್ಲಿ ನಡೆಯಬೇಕು. ನಿಷ್ಠೆಯಿಂದ ನಡೆಯಬೇಕು, ಕರ್ತವ್ಯವನ್ನು ಮಾಡಬೇಕು ಮತ್ತು ಸಾಫಲ್ಯ ಅಥವಾ ವೈಪಲ್ಯದಿಂದ ವಿಚಲಿತರಾಗದೆ ಮುಕ್ತವಾಗಿ ಬಾಳಬೇಕು ಎಂದು ಒಂದು ಆದೇಶವನ್ನು ಇತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Every plaintiff approaches the court thinking he has a iron-clad case. On the day of the judgment, the best way to deal is to be like a witness - not bothering which party wins. A witness' job ends once he has told the complete truth under oath in the stands. One must accept the court's decision as it comes. He must lead the rest of the life like a bikshu (mendicant) who does not grieve/rejoice on previous events. In mind one must be as free as a bird. - Mankutimma
Video Coming Soon
Detailed video explanations by scholars and experts will be available soon.