Back to List

Kagga 574 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೋರು ಧೀರತೆಯಿಂದ, ಮೊಂಡುತನದಿಂ ಬೇಡ । ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ॥ ವೈರಾಗ್ಯ ಕಾರುಣ್ಯ ಮೇಳನವೆ ಧೀರತನ । ಹೋರುದಾತ್ತತೆಯಿಂದ - ಮಂಕುತಿಮ್ಮ ॥ ೫೭೪ ॥

hOru dhIrateyinda, monDutanadim bEDa । vaira hagetana bEDa, hiri niyamavirali ॥ vairAgya kAruNya mELanave dhIratana । hOru udAttateyinda - Mankutimma ॥ 574 ॥

Meaning in Kannada

ಬದುಕಿನಲ್ಲಿ ಧೈರ್ಯದಿಂದ ಹೋರಾಡು. ಆದರೆ ಆ ಹೋರಾಟ ಮೊಂಡುತನದಿಂದಾಗಿರಬಾರದು. ದ್ವೇಷ ಹಗೆತನದಿಂದಾಗಿರಬಾರದು. ಆ ಹೋರಾಟಕ್ಕೆ ಒಂದು ನಿಯಮವಿರಬೇಕು. ವೈರಾಗ್ಯ ಮತ್ತು ಕರುಣೆ ಎರಡರ ಸಮ್ಮಿಲನವೇ ಧೀರತನ. ಅದು ಒಂದು ವ್ಯಕ್ತಿಯಲ್ಲಿ ಉದಾತ್ತತೆಯನ್ನು ತುಂಬುತ್ತದೆ. ಹಾಗಾಗಿ ಬದುಕಿನ ಹೋರಾಟ ಅಂತಹ ಉದಾತ್ತತೆಯಿಂದ ಆಗಬೇಕು ಎಂದು ಕಷ್ಟ ಕಾರ್ಪಣ್ಯಗಳ ಬದುಕನ್ನು ಹೇಗೆ ಎದುರಿಸಬೇಕು, ಬದುಕಿನ ಹೋರಾಟವನ್ನು ಹೇಗೆ ನಿಭಾಯಿಸಬೇಕು ಎಂದು ಸೂಕ್ತ ಸಲಹೆಗಳನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You must fight on with courage. Not by stubbornness. You must not fight just to continue a rivalry. There must be a higher calling. When you can find both detachment and compassion, then courage emerges. Fight showing off such a magnanimous courage. - Mankutimma

Themes

DetachmentLoveWar

Video Section

Video Coming Soon

Detailed video explanations by scholars and experts will be available soon.