Mankutimmana Kagga by D.V. Gundappa
ಹೋರಾಡು ಬೀಳ್ವನ್ನಮೊಬ್ಬಂಟಿಯಾದೊಡಂ । ಧೀರಪಥವನೆ ಬೆದಕು ಸಕಲಸಮಯದೊಳಂ ॥ ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? । ಹೋರಿ ಸತ್ತ್ವವ ಮೆರಸು - ಮಂಕುತಿಮ್ಮ ॥ ೫೭೩ ॥
hOrADu bILvannam obbanTiyAdoDam । dhIrapathavane bedaku sakalasamayadoLu ॥ dUradali goNagutta bALva bALgEnu bele । hOri sattvava merasu - Mankutimma ॥ 573 ॥
ಬದುಕಿನಲ್ಲಿ ಸೋತು ಬಿದ್ದು ಒಬ್ಬಂಟಿಯಾದರೂ, ಎಲ್ಲ ಸಮಯದಲ್ಲೂ ಧೈರ್ಯದ ಮಾರ್ಗವನ್ನೇ ಹುಡುಕಿ, ಹೋರಾಡು. ಸೋತೆನೆಂದು ಗೊಣಗುತ್ತ ಬಾಳುವ ಬಾಳಿಗೆ ಏನು ಬೆಲೆ? ಬದುಕಿನ ಹೋರಾಟವನ್ನು ಹೋರಾಡಿ ಬದುಕಿನ ಸತ್ವವನ್ನು ಅರಿತು ಮೆರೆಸಬೇಕು ಎಂದು ಬದುಕಿನ ಪರಿಯನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Its okay if you (and you alone) fall. You must still continue the fight. Always look to take the courageous path. There is no point in living a life on the sidelines cribbing, but not getting involved. You must endure the hardships and show off your true strengths. - Mankutimma
Video Coming Soon
Detailed video explanations by scholars and experts will be available soon.