Mankutimmana Kagga by D.V. Gundappa
ಪುರುಷಯೋಚನೆಯೆಲ್ಲ ಮುರಿದು ಮಣ್ಣಹುದೆಂದು । ಕೊರಗದಿರು; ಕೆಟ್ಟನೆಂದೆಂದುಮೆನ್ನದಿರು ॥ ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? । ಪರವೆಯೇನಿಲ್ಲವೆಲೊ - ಮಂಕುತಿಮ್ಮ ॥ ೫೭೨ ॥
puruSha yOchaneyella muridu maNNahudendu । koragadiru; keTTenu endu endum ennadiru ॥ sharadhiyoLu mInondu puTTalEm sAyalEm? । paraveyEnillavelo - Mankutimma ॥ 572 ॥
ಅಯ್ಯೋ ನಾವು ಮಾಡುವ ಯೋಚನೆಯೆಲ್ಲಾ ಯಾವುದೂ ಫಲಿಸುವುದಿಲ್ಲ ನಮ್ಮ ಪ್ರಯತ್ನವೆಲ್ಲಾ ಮಣ್ಣಾಗುವುದು ಎಂದು ಕೊರಗದೆ ಇರು. ‘ನಾ ಕೆಟ್ಟೆ’ ಎನ್ನದಿರು. ಕಡಲಿನಲ್ಲಿ ಮೀನು ಒಂದು ಹುಟ್ಟಿದರೇನು ಸತ್ತರೇನು ಕಡಲಿಗೇನೂ ವ್ಯತ್ಯಾಸವಾಗುವುದಿಲ್ಲವಲ್ಲ. ಹಾಗೆಯೇ ನಿನ್ನ ಯೋಚನೆಗೆಲ್ಲ ಒಂದು ರೂಪ ಸಿಗಲೇಬೇಕೆಂದು ನೀ ಯೋಚಿಸಬೇಡ ಎಂದು ನಮ್ಮ ಯೋಚನೆಗಳನ್ನು ಪರಿಪಕ್ವತೆಯೆಡೆಗೆ ಕೊಂಡೊಯ್ಯಲು ಒದಗುವ ವಿಚಾರ ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
When your efforts don't materialize - don't worry too much. Never give up. Never say never again. In the big ocean, if a single fish is born or dies, does it really matter? Individual success or failure are thus insignificant. - Mankutimma
Video Coming Soon
Detailed video explanations by scholars and experts will be available soon.