Back to List

Kagga 571 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? । ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ॥ ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ । ಅನಲನೆಲ್ಲರೊಳಿಹನು - ಮಂಕುತಿಮ್ಮ ॥ ೫೭೧ ॥

ninagirada kaN bAyi vAlmIkige entAytu? । munikavitege entu ninna edeyoL eDeyAytu? ॥ ghanamahimanoL jvalisute itararoLu nidrisute । analanu ellaroLu ihanu - Mankutimma ॥ 571 ॥

Meaning in Kannada

ನಿನಗೆ ಇರುವ ಕಣ್ಣು ಬಾಯಿಗಳೇ ಆ ‘ವಾಲ್ಮೀಕಿ’ ಗೂ ಇತ್ತು, ಬೇರೇನಲ್ಲ. ಆ ಮುನಿ ಬರೆದ ಕವಿತೆಗೆ ನಿನ್ನ ಮನದಲ್ಲೂ ಸ್ಥಳವಾಯಿತಲ್ಲವೇ? ಅಂತಹ ಘನ ಮಹಿಮನಲ್ಲಿ ಜ್ವಲಿಸುವ ಬೆಂಕಿ ಅಥವಾ ಜ್ಞಾನವೇ ಎಲ್ಲರೊಳೂ ಇರುತ್ತದೆ. ಆದರೆ ಕೆಲವರಲ್ಲಿ ಜಾಗೃತವಾಗಿ ಮತ್ತೆ ಕೆಲವರಲ್ಲಿ ಸುಪ್ತವಾಗಿ ಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You have the same mouth and eyes as Valmiki. Then how come he (only he) could create the beautiful Ramayana? How come you like it so much that it has a place in your heart? The inner fire (of love towards the magnanimous) is present in every one. It is asleep in most people but active in the great minds like Valmiki. - Mankutimma

Themes

NatureSocietyLoveWar

Video Section

Video Coming Soon

Detailed video explanations by scholars and experts will be available soon.