Mankutimmana Kagga by D.V. Gundappa
ವಕ್ತ್ರವುಂಟೆಲ್ಲರಿಗೆ, ವರ್ಚಸೋರೊರ್ವರಿಗೆ । ಕತ್ತಿ ಪಣ್ಯದೊಳುಂಟು, ಶಕ್ತಿ ಸಹಜದಲಿ ॥ ವ್ಯಕ್ತಿ ಪ್ರಭಾವೀ ಲೋಕಚರಿತೆಯ ಕೀಲು । ಹಸ್ತವದು ದೈವಕೆಲೊ - ಮಂಕುತಿಮ್ಮ ॥ ೫೭೦ ॥
vaktravuntu ellarige, varchassu Orvorvarige । katti paNyadoLunTu, shakti sahajadali ॥ vyakti prabhAvI lOkachariteya kIlu । hastavadu daivakelo - Mankutimma ॥ 570 ॥
ಎಲ್ಲರಿಗೂ ಮುಖವಿದೆ. ಆದರೆ ಲಕ್ಷಣ ಅಥವಾ ವರ್ಚಸ್ಸು ಕೇವಲ ಕೆಲವರಿಗೆ ಇದೆ. ಹಾಗೆಯೇ ಕತ್ತಿಯನ್ನು ಹಣಕೊಟ್ಟು ಕೊಳ್ಳಬಹುದು. ಆದರೆ ಅದನ್ನು ಎತ್ತಿ ಹೋರಾಡುವ ಶಕ್ತಿ ಸಹಜವಾಗಿ ವ್ಯಕ್ತಿಯಲ್ಲಿರಬೇಕು. ಅಂತಹ ವ್ಯಕ್ತಿಗಳ ಸಹಜ ಶಕ್ತಿಯಾ ಪ್ರಭಾವವೇ ಜಗತ್ತಿನ ಚರಿತ್ರೆಗೆ ಕಾರಕವಾಗಿರುತ್ತದೆ.ಈ ಜಗತ್ತನ್ನು ರೂಪಿಸುವಲ್ಲಿ ತಿದ್ದುವಲ್ಲಿ ಮತ್ತು ನಡೆಸಿಕೊಂಡು ಹೋಗುವಲ್ಲಿ ಆ ದೈವವು ಮನುಷ್ಯನ ಪ್ರಭಾವೀ ಶಕ್ತಿಯನ್ನು ತನ್ನ ಕರಣದಂತೆ ಉಪಯೋಗಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Every one has a mouth. But the charisma to utter the right words is found only in some. One can buy a sword with money. But courage is innate. There are very few people who are capable of making history - those who are courageous and have influence over many with their words. They become instruments of God's will. - Mankutimma
Video Coming Soon
Detailed video explanations by scholars and experts will be available soon.