Mankutimmana Kagga by D.V. Gundappa
ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? । ಮತಿಮನಂಗಳ ಕೃಷಿತಪಃಫಲವುಮಂತು ॥ ಸತತ ಕೃಷಿ, ಬೀಜಗುಣ, ಕಾಲವರ್ಷಗಳೊದವೆ । ಪ್ರತಿಭೆ ವಿಕಸಿತವಹುದೊ - ಮಂಕುತಿಮ್ಮ ॥ ೫೬೯ ॥
kShitiruhake suma phala muhUrta nishchitavEnu? । matimanangaLa kRuShi tapaH phalavum antu ॥ satata kRuShi, bIjaguNa, kAla varShagaLu odave । pratibhe vikasitavahudo - Mankutimma ॥ 569 ॥
ಗಿಡಮರಗಳಿಗೆ, ಹೂ ಹಣ್ಣುಗಳನ್ನು ಬಿಡಲು ಮುಹೂರ್ತವೇನಾದರೂ ನಿಶ್ಚಿತವಾಗಿದೆಯೇನು? ಮನಸ್ಸು ಬುದ್ಧಿಗಳ ಕೃಷಿ ಮತ್ತು ತಪಸ್ಸಿನ ಫಲವೂ ಅಂತೆಯೇ. ಬೀಜದ ಗುಣ ಉತ್ತಮವಾಗಿದ್ದು, ಸಕಾಲದಲ್ಲಿ ಮಳೆಯಾಗಿ, ಮಾಡುವ ಪರಿಶ್ರಮ ಸತತವಾಗಿದ್ದರೆ ಹೇಗೆ ಒಳ್ಳೆಯ ಫಲ ಲಭ್ಯವಾಗುತ್ತದೆಯೋ ಹಾಗೆಯೇ ನಮ್ಮ ಪ್ರತಿಭೆಯನ್ನೂ ಸಹ ಸನ್ಮಾರ್ಗ, ಸತ್ಸಂಗ, ಸದ್ಭಾವದಂತಹ ಸಲಕರಣೆಗಳಿಂದ ನಿರಂತರ ಕೃಷಿಮಾಡಿದರೆ ನಮ್ಮ ಪ್ರತಿಭೆಯೂ ವಿಕಸಿತಗೊಂಡು ಸತ್ಫಲವನ್ನು ನೀಡುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Do the trees have definitely time-table to bear flowers and fruits? The results of our mind and intellect are also like that - no timetable of for results. Constant nurturing, innate qualities of the seed and the right time of the year (climate) will result in flowers and fruits. Human talent is also like wise - will blossom under certain conditions only. - Mankutimma
Video Coming Soon
Detailed video explanations by scholars and experts will be available soon.