Mankutimmana Kagga by D.V. Gundappa
ಮನದ ಭಾವಿತಕೊಪ್ಪುವುಪಕರಣ ನಮಗಿಲ್ಲ । ಎಣಿಕೆಗಳ ಪೂರಯಿಪ ಸಾಧನಗಳಿಲ್ಲ ॥ ಜನುಮಜನುಮಗಳಿಂತು ಪೇಚಾಟ, ತಿಣಕಾಟ । ಮುನಿಪುದಾರಲಿ, ಹೇಳು? - ಮಂಕುತಿಮ್ಮ ॥ ೫೬೮ ॥
manada bhAvitake oppuva upakarana namagilla । eNikegaLa pUrayipa sAdhanegaLilla ॥ januma janumagaLintu pEchATa, tiNakATa । munipudArali, hELu? - Mankutimma ॥ 568 ॥
ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ಕಾರ್ಯರೂಪಕ್ಕೆ ತರಲು ನಮಗೆ ಅವಶ್ಯಕ ಸಾಧನಗಳಿಲ್ಲ. ಈ ಸಾಧನಗಳ ಅಥವಾ ಉಪಕರಣಗಳ ಕೊರತೆ ನಮಗೆ ಜನ್ಮ ಜನ್ಮಾಂತರದಿಂದಲೂ ಕಾಡುತ್ತಾ ಇದೆ. ಇದರಿಂದ ಪ್ರತೀ ಜನ್ಮದಲ್ಲೂ ನಮಗೆ ತಿಣುಕಾಟ ಮತ್ತು ಪೇಚಾಟಗಳು ಇದ್ದೇ ಇರುತ್ತವೆ. "ಇದು ಹೀಗೆ ಏಕಿದೆ?" ಎಂದು ನಾವು ಯಾರಲ್ಲಿ ದೂರುವುದು? ಎಂದು ತಮ್ಮಲ್ಲಿ ತಾವೇ ಪ್ರಶ್ನಿಸುತ್ತಾ ನಮ್ಮ ಮುಂದೆ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
There are no apparatus that are similar to what we have imagined. There are no means to see through our calculations. The same cycle of misery and helplessness is repeated in all the lives. Tell me who should I be angry with? - Mankutimma
Video Coming Soon
Detailed video explanations by scholars and experts will be available soon.