Mankutimmana Kagga by D.V. Gundappa
ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ । ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ ॥ ಅನುರೂಪದಿಂದ ವಾಸ್ತವಗೊಳಿಪ ಕೃತಿಚತುರ । ಧನಿಯರಿವರೆಲ್ಲಿಹರೊ? - ಮಂಕುತಿಮ್ಮ ॥ ೫೬೭ ॥
manada bhAvagaLa pUrNadim oreyalu arita kavi । initanum biDade rUpisal arita shilpi ॥ anurUpadinda vAstavagoLipa kRuti chatura । dhaniyaru avarelliharo? - Mankutimma ॥ 567 ॥
ಮನಸ್ಸಿನಲ್ಲಿ ಬಂದ ಭಾವಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವಂತಾ ಕವಿ, ಸ್ವಲ್ಪವೂ ಕೊರತೆಯಿಲ್ಲದೆ ಕೆತ್ತಬಲ್ಲ ಶಿಲ್ಪಿ, ಯಾವುದೇ ಕೆಲಸವನ್ನು ಹಿಡಿದರೂ ಯೋಜಿಸಿದ್ದನ್ನು ಮಾಡಿಯೇ ತೀರುವ ಕಾರ್ಯ ನೈಪುಣ್ಯತೆಯನ್ನು ಹೊಂದಿರುವ ಧನಿಗಳು ಲೋಕದಲ್ಲಿ ಎಲ್ಲಿದ್ಧಾರೆ, ಎಂದು ಅಂತಹ ನೈಪುಣ್ಯತೆ ಇರುವವರೇ ಜಗತ್ತಿನಲ್ಲಿ ಧನ್ಯರು ಎಂದು ಉಲ್ಲೇಖಿಸಿದ್ದಾರೆ ಈ ಮುಕ್ತಕದಲ್ಲಿ.
Where can one find these fortunate people - a poet who can describe the feelings of the mind completely? a sculptor who can carve everything without leaving out any detail? an builder/engineer who can convert ideas/plans into reality? They are fortunate because they do something that nature does every day with so much ease. - Mankutimma
Video Coming Soon
Detailed video explanations by scholars and experts will be available soon.