Back to List

Kagga 566 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಆರಣ್ಯಕದ ಪುಷ್ಪಗಳ ಮೂಸುವವರಾರು? । ಆರಿಹರು ಪತಗದುಡುಪನು ಹುಡುಕಿ ಮಚ್ಚಲ್? ॥ ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ । ಸ್ವಾರಸ್ಯವೆಸಗುವಳೊ! - ಮಂಕುತಿಮ್ಮ ॥ ೫೬೬ ॥

AraNyakada puShpagaLa mUsuvavaru Aru? । Ariharu patagada uDupanu huDuki mecchal? ॥ bErobbara eNikeyillade prakRuti tanagende । svArasyava esaguvaLo! - Mankutimma ॥ 566 ॥

Meaning in Kannada

ಕಾಡಿನಲ್ಲಿನ ಪುಷ್ಪಗಳ ಸುಗಂಧವನ್ನು ಆಘ್ರಾಣಿಸುವವರು ಯಾರಿದ್ದಾರೆ? ಬಣ್ಣ ಬಣ್ಣಗಳ ಚಿತ್ತಾರಗಳನ್ನು ಹೊತ್ತ ಪತಂಗಗಳ ಹುಡುಕಿ ಹುಡುಕಿ ಮೆಚ್ಚುವವರಾರು? ಮತ್ತೊಬ್ಬರ ಮೆಚ್ಚುಗೆಗೆ ಆಸೆಪಡದೆ ಪ್ರಕೃತಿ ತಾನೇ ತೃಪ್ತಿಪಡಲು ಈ ಜಗತ್ತಿನಲ್ಲಿನ ಎಲ್ಲ ವಸ್ತುಗಳಲ್ಲೂ ಸುಂದರತೆಯನ್ನು ಪ್ರಕಟಿಸಿ ಆಕರ್ಷಣೆಯನ್ನು ಇಟ್ಟು ಜಗತ್ತನ್ನು ಮತ್ತಷ್ಟು ಸ್ವಾರಸ್ಯಕರವಾಗಿಸುತ್ತದೆ ಎಂದು ಪ್ರಕೃತಿಯ ಸಹಜ ಗುಣವನ್ನು ಪ್ರಶಂಸಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Who is there to smell the fragrance of a flower in the forest? Who is there to search and appreciate the colors of the dress of a butterfly? Nature pulls out wonders not caring about who is there to watch them. - Mankutimma

Themes

NaturePeace

Video Section

Video Coming Soon

Detailed video explanations by scholars and experts will be available soon.