Back to List

Kagga 565 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ?- । ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ? ॥ ಮಾಡುವಾ ಮಾಟಗಳನಾದನಿತು ಬೆಳಗಿಪುದು । ರೂಢಿಯಾ ಪ್ರಕೃತಿಯದು - ಮಂಕುತಿಮ್ಮ ॥ ೫೬೫ ॥

kADu hakki huLakke varNa chitragaLEke? । nODuvara kaNNolava bEDuvaLe sRuShTi? ॥ mADuvA mATagaLanu Adanitu beLagipudu । rUDhiyA prakRutiyadu - Mankutimma ॥ 565 ॥

Meaning in Kannada

ಕಾಡಿನ ಹಕ್ಕಿ ಹುಳ ಹುಪ್ಪಟೆಗಳಿಗೆ ಚಿತ್ರ ವಿಚಿತ್ರವಾದ ಬಣ್ಣಗಳು ಏಕೆ ಇವೆ? ನೋಡುವವರು ಅವುಗಳನ್ನು ನೋಡಿ ಒಲವನ್ನು ತೋರಲಿ ಎಂದೇ? ಖಂಡಿತ ಅಲ್ಲ. ಕೋಟ್ಯಾಂತರ ರೂಪ ಮತ್ತು ಬಣ್ಣಗಳಲ್ಲಿ, ಚಿತ್ರ ವಿಚಿತ್ರವಾದ ವಿನ್ಯಾಸಗಳಲ್ಲಿ ಪ್ರಕಟಗೊಳ್ಳುವುದು ಪ್ರಕೃತಿಯ ಸ್ವಧರ್ಮ ಅಥವಾ ರೂಢಿ ಎಂದು ಪ್ರಕೃತಿಯ ಸ್ವಾಭಾವಿಕ ವೈವಿಧ್ಯತೆಯನ್ನು ಎತ್ತಿ ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Why does nature create wonderful sceneries in the forest for birds and insects to see? Does she ask for appreciation from those who see it? It is her practice to exhibit her creations as much as she can - not caring much if there is an audience or not. That is her style. - Mankutimma

Themes

DeathNaturePeace

Video Section

Video Coming Soon

Detailed video explanations by scholars and experts will be available soon.