Mankutimmana Kagga by D.V. Gundappa
ಎತ್ತಲೋ ಕಾಡುಮಬ್ಬಿನ ಬಳ್ಳಿ ಮೊಗ್ಗಿನಲಿ । ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ? ॥ ಕೃತ್ಯಕ್ಕೆ ತಾಂ ತರುವ ಶಕ್ತಿ ಗುಣ ಪೂರ್ಣತೆಯೆ । ಸಾರ್ಥಕವೊ ಜೀವಿತಕೆ - ಮಂಕುತಿಮ್ಮ ॥ ೫೬೪ ॥
ettalO kADu mabbina baLLi mogginali । chitra rachanege adEke toDaguvaL prakRuti ॥ kRutyakke taruva shakti guNa pUrNateye । sArthakavo jIvitake - Mankutimma ॥ 564 ॥
ಪ್ರಕೃತಿಮಾತೆ, ಎಲ್ಲೋ ಒಂದು ಕತ್ತಲೆಯ ಕಾಡಿನಲ್ಲಿ ಒಂದು ಬಳ್ಳಿಯಲ್ಲಿ ಸುಂದರ ಹೂವನ್ನು ಚಿತ್ರದಂತೆ ರಚನೆ ಮಾಡಿ, ತನ್ನ ಶಕ್ತಿಯನ್ನು ಸಾರ್ಥಕಗೊಳಿಸುವಂತೆ, ನಾವು ಮಾಡುವ ಪ್ರತೀ ಕೆಲಸಕ್ಕೂ ಶಕ್ತಿಯನ್ನು ತುಂಬಿ ಪರಿಪೂರ್ಣತೆಯೆಡೆಗೆ ನಡೆದರೆ ನಮ್ಮ ಬದುಕಿಗೂ ಅದು ಸಾರ್ಥಕ್ಯ ಎಂದು ಬದುಕಿನ ಸಾರ್ಥಕತೆಯನ್ನು ಸಾಧಿಸುವ ಪರಿಯನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Why does nature take all the pains to create a wonderful picture (of a flower blossom) in a creeper deep in darkness of the forest? There is no one there to appreciate it. But if is satisfaction enough if one brings all the strength and quality into the work and completes it. - Mankutimma
Video Coming Soon
Detailed video explanations by scholars and experts will be available soon.