Back to List

Kagga 563 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ । ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ॥ ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ । ತಿಳಿದದನು ನೆರವಾಗು - ಮಂಕುತಿಮ್ಮ ॥ ೫೬೩ ॥

biLalalla, bEralla, munDakANDagaLalla । taLiralla, malaralla, kAyi haNNalla ॥ ele nInu; vishva vRukShadoL eleyoLondu nIm । tiLidadanu neravAgu - Mankutimma ॥ 563 ॥

Meaning in Kannada

ಈ ಜಗದ್ವೃಕ್ಷದಲ್ಲಿ ನೀನು ಬಿಳಲಲ್ಲ, ಬೇರಲ್ಲ,ಮುಂಡವಲ್ಲ,ಕಾಂಡವಲ್ಲ,ಚಿಗುರಲ್ಲ,ಹೂವಲ್ಲ,ಕಾಯಿ ಹಣ್ಣೂ ಅಲ್ಲ. ಆ ವೃಕ್ಷದ ಸಹಸ್ರಾರು ಎಲೆಗಳಲ್ಲಿ ನೀನೂ ಸಹ ಒಂದು ಎಲೆ. ‘ನಾನೇ’ ಎನ್ನುವ ಭಾವ ಬಿಟ್ಟು ‘ ನಾನೂ ಎಲ್ಲರಂತೆ’ ಎಂದು ಈ ಬದುಕೆಂಬ ವೃಕ್ಷದಲ್ಲಿ ಒಂದಾಗಿ ಆ ವೃಕ್ಷಕ್ಕೆ ನೆರವಾಗು ಎಂದರೆ ಒಟ್ಟಾರೆ ಬದುಕಿಗೆ ಪೂರಕವಾಗಿ ಜೀವಿಸು ಎಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You are not the struts, not the roots, not the canopy or the branches, not the sprouts, not the flowers or the fruits. You are just a leaf - among the many many leaves in this tree of life. Understand your role and be of use (help). - Mankutimma

Themes

WisdomLifeNatureDetachmentSocietyDuty

Video Section

Video Coming Soon

Detailed video explanations by scholars and experts will be available soon.