Mankutimmana Kagga by D.V. Gundappa
ಎಲೆಗಳನು ಕಡ್ಡಿ, ಕಡ್ಡಿಯ ರಂಬೆಕೊಂಬೆಗಳು । ತಳೆದು ಪೆರ್ಚಿಸುತಿಹುವು ಮರದ ಬಾಳ್ಸಿರಿಯ ॥ ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು । ಹಳಿಯದಿರು ನಿನ್ನಿರವ - ಮಂಕುತಿಮ್ಮ ॥ ೫೬೨ ॥
elegaLanu kaDDi, kaDDiya rambekombegaLu । taLidu perchisutihuvu marada bALsiriya ॥ sthalavondu ninagihudu vishvavRukShadoLantu । haLiyadiru ninna irava - Mankutimma ॥ 562 ॥
ಒಂದು ಅಶ್ವತ್ಥ ವೃಕ್ಷದಲ್ಲಿ ಎಲೆಗಳನ್ನು ಕಡ್ಡಿಗಳೂ, ಕಡ್ಡಿಗಳನ್ನು ರೆಂಬೆಗಳು, ರೆಂಬೆಗಳನ್ನು ಕೊಂಬೆಗಳೂ ತಳೆದು ಆ ಮರದ ಸೊಬಗನ್ನು ಹೆಚ್ಚಿಸುತ್ತದೆ. ಅದೇ ರೀತಿ ಈ ಜಗದ್ವೃಕ್ಷದ ಎಂದರೆ ವಿಶ್ವಜೀವನದ ವೃಕ್ಷದಲ್ಲಿ ಮತ್ತು ಅದರ ಸೊಬಗಿನಲ್ಲಿ ನಿನಗೂ ಒಂದು ಪಾತ್ರವಿದೆ. ಹಾಗಾಗಿ ನಿನ್ನ ಬಾಳನ್ನು ನೀ ಜರಿಯದಿರು, ಹಳಿಯದಿರು ಎಂದು ಜಗತ್ತಿನಲ್ಲಿ ಜನಿಸುವ ಪ್ರತೀ ಜೀವಿಯ ಪಾತ್ರದ ಕುರಿತು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
In this tree of life, the leaves are supported by twigs, twigs by the branches. This way they are all enhancing the beauty of the nature. Every one has his own space in this tree. So, do not hate your existence. - Mankutimma
Video Coming Soon
Detailed video explanations by scholars and experts will be available soon.