Mankutimmana Kagga by D.V. Gundappa
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ । ಕಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ॥ ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ । ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ॥ ೫೬೧ ॥
ondu kaDe chigurutali, ondu kaDe bADutali । kundutire kombe, munDadali habbutali ॥ endendum ashvattha haLe hosadu; tAnadA । spandanavo brahmanadu - Mankutimma ॥ 561 ॥
ಅಶ್ವತ್ಥ ವೃಕ್ಷವು ಒಂದು ಕಡೆ ಬಾಡಿದರೆ ಒಂದುಕಡೆ ಚಿಗುರುವುದು. ಕೆಲ ಕೊಂಬೆಗಳು ಒಣಗುತ್ತಿದ್ದರೆ ಮತ್ತೊಂದು ಕಡೆ ಮೇಲೆ(ಮುಂಡದಲಿ) ಹೊಸ ಚಿಗುರ ತಳೆಯುತ್ತದೆ. ಅದೇ ರೀತಿ ಈ ಜಗದ್ವೃಕ್ಷವೂ ಸಹ ಒಂದು ”ಲಯ”ದಲ್ಲಿ ಬದಲಾಗುತ್ತಾ, ಎಂದೆಂದೂ ಬಾಡದ, ಹಳೆಯದಾಗದ ಮತ್ತೆ ಮತ್ತೆ ಹೊಸತನವನ್ನು ತಳೆಯುವ ರೀತಿಯಲ್ಲಿದೆ ಮತ್ತು ಚಲನ ರೂಪದಲ್ಲಿರುವ ಆ ಬ್ರಹ್ಮನೇ ಈ ಜಗತ್ತು ಎಂದು ಸೃಷ್ಟಿಯ ಸ್ವರೂಪವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರ ಈ ಮುಕ್ತಕದಲ್ಲಿ.
The tree blossoms in one side, and wilts in another. Branches may recede while it expands at the head (which is down). The tree is forever new as well as old. The spirit running through the tree is of the supreme being. - Mankutimma
Video Coming Soon
Detailed video explanations by scholars and experts will be available soon.