Back to List

Kagga 560 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ । ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ ॥ ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು । ಸಾವು ಮರಕೇನಿಲ್ಲ - ಮಂಕುತಿಮ್ಮ ॥ ೫೬೦ ॥

jIvanada mUla mElihudu parama Urdhvadali । tIvirpudadu keLage namma lOkadali ॥ nAvadara kaDDiyele, chiguruvevu, bADuvevu । sAvu marakEnilla - Mankutimma ॥ 560 ॥

Meaning in Kannada

ಜೀವನದ ಮೂಲ ಅಥವಾ ಅಧಾರ ಎಲ್ಲೋ ಮೇಲಿದೆ. ಅದು ಇರುವ ಸ್ಥಳ ಪರಮ ಊರ್ಧ್ವ. ಅದಕ್ಕಿಂತ ಮೇಲೆ ಯಾವುದೂ ಇಲ್ಲ. ಆದರೆ ಅದು ಜಗತ್ತಿನಲ್ಲಿ ಎಲ್ಲೆಲ್ಲೂ ಎಂದರೆ ನಮ್ಮ ಲೋಕದಲ್ಲೂ ವ್ಯಾಪಿಸಿಕೊಂಡಿದೆ. ನಾವುಗಳು ಈ ಜಗತ್ವೃಕ್ಷದ ಕಡ್ಡಿ ಮತ್ತು ಎಲೆಗಳು. ನಾವು ಒಣಗಿ ಬಾಡಿ ಉದುರಿದರೂ ಈ ಜಗತ್ವೃಕ್ಷಕ್ಕೆ ಸಾವು ಎಂಬುದು ಇರುವುದಿಲ್ಲ ಎಂದು ಸೃಷ್ಟಿಯ ಸೂಕ್ಷ್ಮತೆಯನ್ನು,ವ್ಯಾಪ್ತಿಯನ್ನು ಮತ್ತು ನಿರಂತರತೆಯನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

The root source of life is at the very top of the tree (inverted) in the Supreme Being. It sends out the life giving freshness to our world. We are the twigs and leaves of the tree. We blossom and wilt in time. But there is no death to the tree itself. - Mankutimma

Themes

DevotionLifeDeathNatureDetachmentSelfWar

Video Section

Video Coming Soon

Detailed video explanations by scholars and experts will be available soon.