Mankutimmana Kagga by D.V. Gundappa
ಪರಮಪದದಲಿ ನೋಡು; ಬೇರುಗಳ್ ವ್ಯೋಮದಲಿ । ಧರೆಗಿಳಿದ ಕೊಂಬುರಂಬೆಗಳು, ಬಿಳಲುಗಳು ॥ ಚಿರಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ । ಪರಿಕಿಸಿದರರ್ಥವನು - ಮಂಕುತಿಮ್ಮ ॥ ೫೫೯ ॥
paramapadadali nODu; bErugaL vyomadali । dharegiLida komburambegaLu, biLalugaLu ॥ chirajIvivRukShavidu vishva jIva ashvattha । parikisu idara arthavanu - Mankutimma ॥ 559 ॥
ನಿಸರ್ಗದಲ್ಲಿ ಮರವು ಮೇಲಿದ್ದರೆ ಬೇರುಗಳು ಭೂಮಿಯ ಒಳಗೆ ಇರುತ್ತದೆ. ಆದರೆ ಜಗದ್ವೃಕ್ಷದ ಬೇರುಗಳು ಆಕಾಶದಲ್ಲಿ ಅಥವಾ ಪರಮ ಪದದಲ್ಲಿ ಇರುತ್ತದೆ. ಅವು ಪರಮ ಪದದ ಬೇರುಗಳಾದ್ದರಿಂದ ಬದುಕು ಚಿರಂತನ ಮತ್ತು ನಿರಂತರ. ಇದನ್ನು ವಿಶ್ವ ಜೀವಾಶ್ವತ್ಥ ಎಂದು ಕರೆದು ಬದುಕಿನ ಮೂಲ ಮತ್ತು ಅಗಾಧತೆಯನ್ನು ಅರುಹಿ, ಅದರ ಅರ್ಥವನ್ನು ಪರೀಕ್ಷಿಸಿ ನೋಡು ಎಂದು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು
Try looking at the universal true picture - there is a tree with its root in the sky. Towards the earth are its twigs, branches and struts. This is the tree of life. This is the universe symbolized as a Ashwattha tree (root being the supreme being - God, and leaves are beings of this world). Try and analyze its meaning. - Mankutimma [Translator's note: This verse is essence of a shloka from Bhagavadgita - Chapter 15, Verse 1]
Video Coming Soon
Detailed video explanations by scholars and experts will be available soon.