Back to List

Kagga 589 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪರಿ ಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು । ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ ॥ ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ । ಬಿರಿದ ನನೆ ಫಲಕೆ ಮನೆ - ಮಂಕುತಿಮ್ಮ ॥ ೫೮೯ ॥

pari pari parIkShegaLu, paribhavada shikShegaLu । garaDiya vyAyAma manabuddhigaLige ॥ puruShatege peTTugaLinAda gantiye vijaya । birida nane phalake mane - Mankutimma ॥ 589 ॥

Meaning in Kannada

ಗರಡಿಯ ಮನೆಯಲ್ಲಿ ಜಟ್ಟಿಗೆ ವ್ಯಾಯಾಮವಾದಂತೆ, ನಮಗೆ ಬದುಕಿನಲ್ಲಿ ಪರಿ ಪರಿಯಾದ ಪರೀಕ್ಷೆಗಳು, ಅ ಪರೀಕ್ಷೆಗಳಿಂದಾಗುವ ಸೋಲು, ಸೋಲಿನಿಂದಾಗಿ ಅನುಭವಿಸಬೇಕಾದ ವ್ಯಾಕುಲತೆಯ ಶಿಕ್ಷೆ, ಇವುಗಳೆಲ್ಲ ನಮ್ಮ ಮನಸ್ಸು ಬುದ್ಧಿಗಳಿಗೆ ಆಗುವ ವ್ಯಾಯಾಮದಂತೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಗಿಡದಲ್ಲಿನ ಒಂದು ಹೂ ಅರಳಿನಿಂತರೆ ಅದು ಮುಂಬರುವ ಹಣ್ಣಿಗೆ ನಾಂದಿಯಾದಂತೆ, ಬದುಕಿನಲ್ಲಿ ನಮಗೆ ಸಿಗುವ ಈ ಪೆಟ್ಟುಗಳಿಂದಲೇ ಮನಸ್ಸು ಬುದ್ಧಿಗಳು ಪಕ್ವವಾಗಿ, ಬಾಳಿನಲ್ಲಿ ನಮಗೆ ಜಯ ಸಿಗುತ್ತದೆ, ಎಂದು ನಮ್ಮ ಅನುಭವಗಳಿಂದ ಸಿಗುವ ಫಲದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Life puts you through a series of exams. It makes you suffer defeat many times. These are to be taken as exercises of mind and intellect. The wounds on the mind and body should be considered as scars of victory. Only when a flower wilts, the fruit makes it its home. For good things to happen, we will have go through rough times. - Mankutimma

Themes

LifeMoralityNature

Video Section

Video Coming Soon

Detailed video explanations by scholars and experts will be available soon.