Back to List

Kagga 58 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮಲೆಕಣಿವೆಗಳ ಬೆರಗು ಪ್ರಕೃತಿಕೊಪದ ಗುಡುಗು । ಕಳೆಯೊಲವು ನಲ್ಲೆಯ ವಿಯೊಗವಿಂತಹವು ॥ ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ । ನೊಳದನಿಯದೊಂದರಿಂ - ಮಂಕುತಿಮ್ಮ ॥ ೫೮ ॥

male kaNivegaLa beragu prakRuti kOpada guDugu । keLeya olavu nalleya viyOgavu intahavu ॥ nilisi manada Otavanu mUkagoLipuvuvu ennanu । oLadaniyadondarim - Mankutimma ॥ 58 ॥

Meaning in Kannada

ಬೆಟ್ಟಗುಡ್ಡಗಳು ಅದರಲ್ಲಿರುವ ಕಣಿವೆಗಳು, ಪ್ರಕೃತಿ ವಿಕೋಪದ ಗುಡುಗು ಸಿಡಿಲು, ಮಳೆ, ಚಂದಮಾರುತದಂತಾ ವಿಷಯಗಳು, ಸ್ನೇಹಿತನ ಒಲವು, ಪ್ರೇಯಸಿಯ ವಿಯೋಗದಂತಾ ವಿಷಯಗಳು ನಮ್ಮ ಮನಸ್ಸನ್ನು ಆಳುವಾಗ, ಇವುಗಳನ್ನೆಲ್ಲ ನಿಲ್ಲಿಸಿ ಮನಸ್ಸನ್ನು ನನ್ನ ಒಳದನಿಯು ಮಾತ್ರ ಸುಮ್ಮನಾಗಿಸುವುದು ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಹೇಳುತ್ತಾರೆ.

Meaning & Interpretation

There are some instances in our lives when our minds stopping running around; when we stop talking and become speechless because it wakes up our inner conscience (and makes us see the truth). Seeing mighty mountains and valleys, natures fury and thunder, love of friends, separation from wife - these are a few of such situations. - Mankutimma

Themes

WisdomDeathNatureSocietyLove

Video Section

Video Coming Soon

Detailed video explanations by scholars and experts will be available soon.