Mankutimmana Kagga by D.V. Gundappa
ಆಗುಂಬೆಯಸ್ತಮಯ ದ್ರೋಣಪರ್ವತದುದಯ । ತ್ಯಾಗರಾಜನ ಗಾನ ವಾಲ್ಮೀಕಿ ಕವನ ॥ ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ । ಯೋಗಪುಲಕಾಂಕುರವ? - ಮಂಕುತಿಮ್ಮ ॥ ೫೭ ॥
Agumbeya astamaya drONaparvatada udaya । tyAgarAjana gAna vAlmIki kavana ॥ Agisade tAvivu emma antarangadi satya । yOga pulakAnkurava? - Mankutimma ॥ 57 ॥
ಆಗುಂಬೆಯ ಸೂರ್ಯಾಸ್ತಮಾನ ದ್ರೋಣಪರ್ವತದ ಸೂರ್ಯೋದಯ, ತ್ಯಾಗರಾಜನ ಗಾನ ವಾಲ್ಮೀಕಿಯ ಕವನ ಇವೆಲ್ಲವೂ ನಮ್ಮ ಅಂತರಂಗದಲ್ಲಿ ಸತ್ಯದ ದರ್ಶನವನ್ನು ಮಾಡಿಸಿ ರೋಮಾಂಚನಗೊಳಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
The sunset of Agumbe, the sunrise of Dronaparvatha (now known as Baba Budan Giri), listening to Tyagaraja's compositions, reading poems from Ramayana written by Valmiki - Have all these not sprout the bud of happiness of realizing the eternal truth in our minds? - Mankutimma
Video Coming Soon
Detailed video explanations by scholars and experts will be available soon.