Mankutimmana Kagga by D.V. Gundappa
ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ । ಭೂಲೋಕದರಚು ಕೆಳಗಿಂ ಮೂಳೆಯಳುವು ॥ ಕೇಳಬರುತೀ ಮೂರು ಕೂಗೆನ್ನ ಹೃದಯದಲಿ । ಮೇಳಯಿಸುತಿದೆ ಸಂತೆ - ಮಂಕುತಿಮ್ಮ ॥ ೫೬ ॥
mElinda nakShatra jayaghOSha suttaNim । bhUlOkada arachu keLagim mULeya aLuvu ॥ kELabarutI mUru kUgenna hRudayadali । mELayisutide sante - Mankutimma ॥ 56 ॥
ಇಡೀ ಸೃಷ್ಟಿಯ ವಿಸ್ಮಯಗಳು, ಅವುಗಳ ಬಗ್ಗೆ ನಮ್ಮ ಯೋಚನೆ ಕಾಣುವ, ಕಾಣದ, ಕೇವಲ ಊಹಿಸಿ ಅನುಭವಿಸಬಹುದಾದ ಆ ವಿಸ್ಮಯಭರಿತ ಲೋಕದ ಬಗ್ಗೆ ನಮ್ಮ ಆಲೋಚನೆ, ಕಂಡದ್ದು ,ಕೇಳಿದ್ದು, ಅನುಭವಿಸಿದ್ದು ಎಲ್ಲದರ ವಿಚಾರ ತಲೆಯಲ್ಲಿ. ಇನ್ನು ನಮಗೆ ಕಾಣುವ ಸೂರ್ಯ ಚಂದ್ರರು, ನಕ್ಷತ್ರ ಪುಂಜಗಳು, ಗಾಳಿ, ಮಳೆ, ಮೋಡ, ಮಿಂಚು, ಗುಡುಗು, ಸಿಡಿಲುಗಳಂತಹ ವಿಷಯಗಳು ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ಮತ್ತು ಕಡೆಯದಾಗಿ ನಮ್ಮ ಪ್ರಪಂಚದ ಮತ್ತು ಭೂಮಿಯ ಮೇಲಿನ ಸಕಲ ಪ್ರಾಣಿಗಳ ಬಗ್ಗೆ ವಿಚಾರ ವಿಷಯಗಳೆಲ್ಲ ನಮ್ಮ ತಲೆಗಳಲ್ಲಿ ಸೇರಿಕೊಂಡು ಒಂದು ಸಂತೆಯಲ್ಲಿ ಆಗುವಷ್ಟು ಗಲಭೆ ಶಬ್ಧ ನಮ್ಮ ಅಂತರ್ಯದಲ್ಲಿ ನಡೆಯುತ್ತಿರುತ್ತದೆ ಎನ್ನುವುದೇ ಈ ಕಗ್ಗದ ಹೂರಣ.
The joy of the stars, the chaos of this world, the agony of those who are burried below - these are the three voices that my heart hears. The voices are all telling different things and it is utter chaos - as if a village market. - Mankutimma
Video Coming Soon
Detailed video explanations by scholars and experts will be available soon.