Mankutimmana Kagga by D.V. Gundappa
ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ । ಮನಗಾಣಿಸಲು ನಿನಗೆ ದೈವದದ್ಭುತವ? ॥ ಮನುಜರೊಳಗಾಗಾಗ ತೋರ್ಪ ಮಹನೀಯಗುಣ । ವನುವಾದ ಬೊಮ್ಮನದು - ಮಂಕುತಿಮ್ಮ ॥ ೫೯ ॥
maNi mantra tantra siddhigaLa sAkShyagaLEke । managANisalu ninage daivada adbhutava? ॥ manujaroLu AgAgAga tOrpa mahanIyaguNa । vanuvAda bommanadu - Mankutimma ॥ 59 ॥
ಆ ಪರತತ್ವದ ಅದ್ಭುತ ಕ್ರಿಯೆಗಳನ್ನು ನೋಡಲು ಮನಗಾಣಲು, ನಾವು ಮಂತ್ರ ತಂತ್ರ ಸಿದ್ಧಿಗಳಿಗೆ ಏಕೆ ಶರಣಾಗಬೇಕು? ಮನುಜರಲ್ಲಿ ಅಗಾಗ ಕಾಣುವ ಮಹನೀಯ ಗುಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ನಮಗೆ ದೈವದ ಕ್ರಿಯೆ ಅರ್ಥವಾಗುತ್ತದೆ, ಎನ್ನುವುದೇ ಈ ಕಗ್ಗದ ಹೂರಣ .
Why does one need look at gems, hymns, rituals and other accomplishments as proof of God's existence? Isn't the extraordinary noble qualities found in ordinary men once in a while enough proof? - Mankutimma
Video Coming Soon
Detailed video explanations by scholars and experts will be available soon.