Mankutimmana Kagga by D.V. Gundappa
ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ । ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ॥ ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಿಕಿಯುಂ । ಸಂತತದಪೇಕ್ಷಿತವೊ - ಮಂಕುತಿಮ್ಮ ॥ ೫೫೭ ॥
antarangada gavAkShagaLa terediDalu alli । chinte kumuladu, hogegaLu ottavu Atmavanu ॥ shAnti bELpoDe manege gODevole kitikiyum । santatadapEkShitavo - Mankutimma ॥ 557 ॥
ಅಂತರ್ಮುಖಿಗಳಾದಾಗ, ನಮಗೆ ನಮ್ಮ ಅಂತರಂಗದಲ್ಲಿ ನಡೆಯುವ ವಿಧ್ಯಮಾನಗಳ ಅರಿವಾಗುತ್ತದೆ. ಮನವನ್ನು ಮುಕ್ತವಾಗಿಡದೆ ಎಲ್ಲ ಕದ-ಕಿಟಕಿಗಳನ್ನು ಮುಚ್ಚಿಕೊಂಡುಬಿಟ್ಟರೆ ನಮ್ಮ ಚಿಂತೆ ಒಳಗೊಳಗೇ ಸುಟ್ಟು ಹೊಗೆಯಾಡುತ್ತದೆ ಮತ್ತು ಆ ಹೊಗೆಯ ದಟ್ಟತೆಯಲ್ಲಿ ಅಶಾಂತಿಯಿಂದ ಮನಸ್ಸು ಬುದ್ಧಿ ಆತ್ಮಗಳು ಸೊರಗುತ್ತವೆ. ಹಾಗಾಗಿ ನಮಗೆ ನಿರಂತರದ ಶಾಂತಿ ಬೇಕಿದ್ದಲ್ಲಿ ಮನದ ಗೋಡೆಯಲ್ಲಿ ಕಿಟಕಿಗಳಿರಬೇಕು ಎಂದು ಒಂದು ಸಂದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If your inner conscience has enough windows, then worries will not get built up with in. Those worries can not suffocate your soul since they are let out through the windows. If you want peace, then realize that windows are as important for a house as the walls. Find such windows for yourself. - Mankutimma
Video Coming Soon
Detailed video explanations by scholars and experts will be available soon.