Back to List

Kagga 556 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ । ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ॥ ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ । ಸತ್ತ್ವದಚ್ಛಿನ್ನ ಝರಿ - ಮಂಕುತಿಮ್ಮ ॥ ೫೫೬ ॥

shakti mIrda parIkShegaLanu vidhi niyamisire । yukti mIrda prashnegalanu kELutire ॥ chittavanu tirugisu oLagaDe; nODu nODalli । sattvada achChinna jhari - Mankutimma ॥ 556 ॥

Meaning in Kannada

ಬದುಕಿನಲ್ಲಿ ನಮ್ಮ ಶಕ್ತಿಗೆ ಮೀರಿದ ಪರೀಕ್ಷೆಯಾದರೆ ಮತ್ತು ನಾವು ಎದುರಿಸುವ ವಿಷಮ ಪರಿಸ್ಥಿತಿಗಳಿಂದ ನಮ್ಮ ಮನದಲ್ಲಿ ನಮಗೆ ಅರ್ಥವಾಗದ ಮತ್ತು ಉತ್ತರವೇ ಸಿಗದ ‘ಏಕೆ ಹೀಗೆ?’ ‘ಇದು ಏನು?’ ‘ಪರಿಹಾರವೇನು?" ಎಂಬಂತಹ ಪ್ರಶ್ನೆಗಳು ಉದ್ಭವವಾದಾಗ, ಅಂತರ್ಮುಖಿಗಳಾದರೆ ನಮಗೆ ಅಲ್ಲಿ ನಿರಂತರ ಹರಿಯುವ ಜ್ಞಾನದ ಝರಿ ಕಾಣುತ್ತದೆ ಮತ್ತು ಆ ಜ್ಞಾನದ ಝರಿಯಲ್ಲಿ ಮಿಂದಾಗ, ಚಿತ್ತ ಹರ್ಶಿತವಾಗುತ್ತದೆ ಎಂದು ಅಂತರಂಗದ ಶಾಂತಿಯ ಉಪಾಯವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

If life throws difficult tests at you or asks you tough questions, turn your thinking inwards. There; Right there you will find all answers - the continuous flow (stream) of cosmic truth. We should know how to tap it. - Mankutimma

Themes

WisdomLifeMoralityWar

Video Section

Video Coming Soon

Detailed video explanations by scholars and experts will be available soon.