Mankutimmana Kagga by D.V. Gundappa
ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು । ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ॥ ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ । ನೆಮ್ಮಲಿನ್ನೇನಿಹುದೊ? - ಮಂಕುತಿಮ್ಮ ॥ ೫೫೫ ॥
dharma sankaTadi mana tallaNisutiruvandu । nirmathisu ninnAtmavanu mamate biTTu ॥ nirmamada sadvivEkada dIpakinta nIm । nemmalu innEnihudo? - Mankutimma ॥ 555 ॥
ಮನದಲ್ಲಿ ಮೂಡುವ ಭಾವಗಳಲ್ಲಿ, ಅದೋ-ಇದೋ, ಹೇಗೊ-ಹಾಗೋ ಎಂದು ದ್ವಂದ್ವಗಳಲ್ಲಿ ಸಿಲುಕಿದಾಗ ವಿಷಯದ ಮಂಥನ ಅಂತರಂಗದಲ್ಲಿ ಮಾಡಿ ಸರಿಯಾದ ನಿರ್ಣಯವನ್ನು ತೆಗೆದುಕೋ. ಮಮತೆಯನ್ನು ತೊರೆದು ವಿವೇಕದಿಂದ ತೆಗೆದುಕೊಂಡ ನಿರ್ಣಯಗಳನ್ನು ನೀನು ನೆಚ್ಚಿಕೊ ಮತ್ತು ನಂಬಿಕೋ ಎಂದು ಒಂದು ಕ್ರಮವನ್ನು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
When your mind is faced with an ethical dilemma, then do a critical examination of self - but only after removing self from the equation. When you remove the self, then a good wisdom emerges. Nothing is more reliable than that. - Mankutimma
Video Coming Soon
Detailed video explanations by scholars and experts will be available soon.