Back to List

Kagga 554 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಿಳಿವಿಗೊಳಿತೆನಿಸುದುದು ನಡೆಯೊಳೇತಕ್ಕರಿದು? । ಕುಳಿ ಮೇಡು ದೂರ ಮತಿಮನಸುಗಳ ನಡುವೆ ॥ ಒಳಗಿನಾಯೆಣ್ಣೆ ಬತ್ತಿಗಳೆರಡುಮೊಡವೆರೆಯೆ । ಬೆಳಕು ಜೀವೋನ್ನತಿಗೆ - ಮಂಕುತಿಮ್ಮ ॥ ೫೫೪ ॥

tiLivige oLitenisidudu naDeyoLu Etakkaridu? । kuLi mEDu dUra mati manasugaLa naDuve ॥ oLaginAyeNNe battigaLu eraDum oDavariye । beLaku jIvOnnatige - Mankutimma ॥ 554 ॥

Meaning in Kannada

ನಮ್ಮ ಅರಿವಿಗೆ ಒಳಿತು ಎನಿಸಿದ್ದು ನಮ್ಮ ನಡತೆಯಲ್ಲಿರುವುದಿಲ್ಲ ಏಕೆ? ನಮಗಿರುವ ತಿಳುವಳಿಕೆ ಮತ್ತು ಮನಸ್ಸಿನ ನಡುವೆ ಬೆಟ್ಟ ಮತ್ತು ಕಮರಿಗಳಷ್ಟು ಅಂತರವಿದೆ. ನಮ್ಮ ಅರಿವು ಮತ್ತು ಮನಸ್ಸುಗಳು ದೀಪದ ಎಣ್ಣೆ ಮತ್ತು ಬತ್ತಿಗಳಂತೆ ಒಂದಕ್ಕೊಂದು ಪೂರಕವಾಗಿದ್ದರೆ ನಮ್ಮ ಜೀವದ ಉನ್ನತಿಗೆ ಬೆಳಕಾಗುತ್ತದೆ ಎಂದು ಮತಿ ಮನಸ್ಸುಗಳ ಪೂರಕತೆಯ ಅವಶ್ಯಕತೆಯನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Intellect knows about the right and the wrong. But the mind does not let us always choose the right. There is a valley (and two hills) difference between the mind and the intellect. Only then they both strive together - like the oil and the wick in a lamp - does life become happy and elevated. - Mankutimma

Themes

LifeMorality

Video Section

Video Coming Soon

Detailed video explanations by scholars and experts will be available soon.