Mankutimmana Kagga by D.V. Gundappa
ಚೂರುಗಳು ಹದಿನಾರು ಚಂದ್ರಮಂಡಲಕಂತೆ । ನೂರಾರು ಚೂರುಗಳು ಸತ್ಯಚಂದ್ರನವು ॥ ಸೇರಿಸುತಲವುಗಳನು ಬಗೆಯರಿತು ಬೆಳಸುತಿರೆ । ಸಾರ ಋತಪೂರ್ಣಿಮೆಯೊ - ಮಂಕುತಿಮ್ಮ ॥ ೫೫೩ ॥
chUrugaLu hadinAru chandramanDalakante । nUrAru chUrugaLu satya chandranavu ॥ sErisutal avugaLanu bageyaritu beLasutire । sAra RutapUrNimeyo - Mankutimma ॥ 553 ॥
ಚಂದಿರ ಅಮಾವಾಸ್ಯೆಯಿಂದ ಹಿಡಿದು ಹುಣ್ಣಿಮೆಯ ತನಕ ಹದಿನಾರು ದಿನ ಪ್ರತಿನಿತ್ಯ ನಮಗೆ ಒಂದೊಂದು ಚೂರಾಗಿ ಕಂಡು ಮತ್ತು ಪ್ರತಿನಿತ್ಯ ಆ ಚೂರುಗಳು ಬೆಳೆದು ಹುಣ್ಣಿಮೆಯಂದಿಗೆ ಪೂರ್ಣಚಂದ್ರನಾಗಿ ಬೆಳಗುವಂತೆ ನಾವು ಕಂಡುಕೊಳ್ಳುವ ಸಾವಿರಾರು ಚಿಕ್ಕ ಚಿಕ್ಕ ಸತ್ಯಗಳನ್ನು ಒಟ್ಟುಗೂಡಿಸುತ್ತಾ ಹೋದರೆ ಎಂದೋ ಒಂದು ದಿನ ನಮಗೂ ಅಂತರಂಗದಲ್ಲಿ ಪೂರ್ಣರೂಪದಲ್ಲಿ ಸತ್ಯದರ್ಶನವಾದೀತು ಎಂದು ಸತ್ಯಾನ್ವೇಷಣೆಯ ಮಾರ್ಗವನ್ನು ನಮಗೆ ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There are sixteen pieces of the moon. When joined properly from the first to fifteenth day, you will see the beautiful full moon. The moon of universal truth has hundreds of pieces. When you can understand each piece, keep them in right place and grow, a beautiful full moon of truth will appear. - Mankutimma
Video Coming Soon
Detailed video explanations by scholars and experts will be available soon.