Mankutimmana Kagga by D.V. Gundappa
ಶ್ರುತಿಯರ್ಥ ವಿಶದವಪ್ಪುದು ಪುರುಷಭಾಷ್ಯದಿಂ । ಶ್ರುತಿಮತಿಗಳನ್ಯೋನ್ಯಪರಿಪೂರಕಂಗಳ್ ॥ ಯತಿಯೊಳವು ಸೇರಿರಲು ಸತ್ಯದರ್ಶನ ನಿನಗೆ । ಕೃತ ಸಮನ್ವಯನಾಗು - ಮಂಕುತಿಮ್ಮ ॥ ೫೫೨ ॥
shrutiya artha vishadavappudu puruSha bhAShyadim । shruti matigaLa anyOnya paripUrakangaL ॥ yatiyoLu avu sEriralu satya darshana ninage । kRuta samanvayanAgu - Mankutimma ॥ 552 ॥
ಶ್ರುತಿಯ (ವೇದದ) ಅರ್ಥವು, ಅದನ್ನು ಜಿಜ್ಞಾಸೆಗೊಳಪಡಿಸಿದಾಗ ತಿಳಿಯಾಗುತ್ತದೆ. ಹಾಗೆ, ಕೇಳಿದ ವಿಷಯ ನಮ್ಮ ಮನಸ್ಸಿನಲ್ಲಿ ಜಿಜ್ಞಾಸೆಯನ್ನುಂಟುಮಾಡಿದ್ದಾಗ ಮತ್ತು ಕೇಳಿದ ವಿಷಯ ಮತ್ತು ನಾವು ಅರಿತುಕೊಂಡದ್ದು ಒಂದಕ್ಕೊಂದು ಪೂರಕವಾಗಿ ಸೇರಿದರೆ ನಮಗೆ ಸತ್ಯದ ದರ್ಶನವಾಗುತ್ತದೆ. ಹಾಗೆ ನಮಗೆ ದೃಗ್ಗೋಚರವಾದ ಸತ್ಯವನ್ನು ನಾವು ಕೃತಿಯಲ್ಲಿ ಅಳವಡಿಸಿಕೊಂಡು,’ಕೃತಸಮನ್ವಯ’ರಾಗಬೇಕು ಎಂದು ಮಾನ್ಯ ಗುಂಡಪ್ಪನವರು ನಮಗೆ ತಿಳಿಸಿದ್ದಾರೆ ಈ ಮುಕ್ತಕದಲ್ಲಿ.
The knowledge hidden in the scriptures are difficult to discern unless somebody explains them to us as discourses. The words in the scriptures and the mind that can understand should fuse into one as complementary to each other. That is found in a few saints. Through them, you can see the universal truth. You also try to find a balance in the words and experiences. - Mankutimma
Video Coming Soon
Detailed video explanations by scholars and experts will be available soon.