Back to List

Kagga 551 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ । ಸನ್ನಾಹ ಸಾಗೀತೆ? ದೈವವೊಪ್ಪೀತೆ? ॥ ಮನ್ನಿಸಲಿ ವಿಧಿ ನಿನ್ನ ಬೇಡೀಕೆಯ, ಭಿನ್ನಿಸಲಿ । ನಿನ್ನ ಬಲವನು ಮೆರಸೊ - ಮಂಕುತಿಮ್ಮ ॥ ೫೫೧ ॥

ninna hegalina horeya diavabhujakErisuva । snnAha sAgIte? daivavoppIte? ॥ mannisali vidhi ninna bEDIkeya, bhinnasali । ninna balavanu meraso - Mankutimma ॥ 551 ॥

Meaning in Kannada

ನಾವು ಹೊತ್ತು ತಂದ ವಿಧಿಯ ಹೊರೆಯನ್ನು ನಾವು ಹೊರದೆ ದೈವದ ಭುಜಕ್ಕೆ ಏರಿಸುವ ಪ್ರಯತ್ನ ಸರಿಯಾದೀತೆ? ಅದನ್ನು ದೈವವಾದರೂ ಒಪ್ಪೀತೆ? ನಾವು ನಮ್ಮ ಭಾರವನ್ನು ದೈವಕ್ಕೆ ಹೊರಿಸಲು ಪ್ರಯತ್ನಿಸಿದಾಗ ಅದನ್ನು ದೈವ ಮನ್ನಿಸಲಿ ಅಥವಾ ತಿರಸ್ಕರಿಸಲಿ, ನಾವು ಮಾತ್ರ ನಮಗೆ ದೈವವಿತ್ತಿರುವ ಶಕ್ತಿಯನ್ನು ಉಪಯೋಗಿಸಿ ನಮ್ಮ ಭಾರವನ್ನು ಹೊರವ ಪ್ರಯತ್ನವನ್ನು ಮಾಡಬೇಕು ಎಂದು ವಿಧಿ, ಪುರುಷ ಪ್ರಯತ್ನ ಮತ್ತು ದೈವ ಕೃಪೆಗಳನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

If you try to wriggle away from your responsibilities and put the weight on Providence, do you think it would work? Will Providence concur? It may or may not honor your request. But, you should continue to show your strength and do as much as you can. - Mankutimma

Themes

Duty

Video Section

Video Coming Soon

Detailed video explanations by scholars and experts will be available soon.