Back to List

Kagga 550 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ । ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ॥ ಕೀಳ ಮೇಲಾಗಿಪನು ಮೇಲ ಕೀಳಾಗಿಪನು । ತಾಳುಮೆಯಿನಿರು ನೀನು - ಮಂಕುತಿಮ್ಮ ॥ ೫೫೦ ॥

tALi melumelane omme dhALi rabhasadin imme । hELadeye kELadeye bahanu vidhirAya ॥ kILa mElAgipanu mEla kILAgipanu । tALumeyin iru nInu - Mankutimma ॥ 550 ॥

Meaning in Kannada

ಆ ವಿಧಿರಾಯ ಪ್ರತಿಯೊಬ್ಬರ ಬದುಕಿನಲ್ಲೂ ನಮ್ಮ ಅರಿವಿಗೆ ಬಾರದಂತೆಯೇ ಹೇಳ ಕೇಳದೆಯೇ ಕೆಲವು ಬಾರಿ ತಡೆದು ಮೆಲ್ಲ ಮೆಲ್ಲನೆ ತನ್ನ ಪ್ರಭಾವವನ್ನು ತೋರಿದರೆ,ಮತ್ತೆ ಕೆಲವು ಬಾರಿ ರಭಸದಿಂದ ಬದುಕನ್ನು ಬುಡಮೇಲಾಗಿಸುವನು. ಅದನ್ನು ತಡೆಯಲು ನಮ್ಮಿಂದಾಗುವುದಿಲ್ಲವಾದ್ದರಿಂದ ಸಹನೆಯಿಂದ ಇರುವುದೇ ಸರಿಯಾದ ದಾರಿ ಎಂದು ವಿಧಿಯ ಆಟವನ್ನು ಮತ್ತು ಅದನ್ನು ಸಹಿಸುವ ಪರಿಯನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Sometimes he comes very slowly and pleasantly. Some times he comes with all his force. He never comes giving prior notice - such are the acts of Providence. He will make the miserable prosperous and the prosperous miserable. You should only stay put with patience. - Mankutimma

Themes

Video Section

Video Coming Soon

Detailed video explanations by scholars and experts will be available soon.