Back to List

Kagga 549 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು । ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ॥ ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು । ಅದಟದಿರು ನೀನವನ - ಮಂಕುತಿಮ್ಮ ॥ ೫೪೯ ॥

vidhige nIm kAryanakSheya vidhisa horaDadiru । adhikAri nInalla; vidhi beppanalla ॥ hadavaritu vidhi tAne kudurisuvanu ellavanu । adaTadiru nInavana - Mankutimma ॥ 549 ॥

Meaning in Kannada

ವಿಧಿಗೆ ತನ್ನದೇ ಆದ ಕಾರ್ಯದ ಒಂದು ನಕ್ಷೆಯಿದೆ. ನೀನು ನಿನ್ನ ವಿಧಿಗೆ ಅಧಿಕಾರಿಯಲ್ಲ. ಆ ವಿಧಿ ಬೆಪ್ಪನಲ್ಲ. ವಿಧಿ ನಿನ್ನ ಜೀವನವನ್ನು ಹದವರಿತು ಸೂಕ್ತವಾಗಿ ಸರಿಪಡಿಸುವ (ಕುದುರಿಸುವ). ನೀನು ಅವನನ್ನು ಗದರಿಸದೆ ಇರು ಎಂದು ವಿಧಿಯಾಟದ ಲಕ್ಷಣವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Don't try to give a blue print to Providence and expect it to follow it. You are not its master. Neither is Providence an idiot. It will let good things happen when the time (and ecosystem) is just right for it. Don't fight with Providence. - Mankutimma

Themes

MoralityDetachmentWar

Video Section

Video Coming Soon

Detailed video explanations by scholars and experts will be available soon.