Mankutimmana Kagga by D.V. Gundappa
ಪುರುಷಬುದ್ಧಿಯೆ ಸಾಕು ವರಸಿದ್ಧಿಗೆಂದಲ್ಲ । ಪರಮೇಶಕರುಣೆಯನವಶ್ಯವೆಂದಲ್ಲ ॥ ಚರಣ ನಡೆವನಿತು ಕಣ್ಣರಿವನಿತು ದೂರ ನೀಂ । ಚರಿಸದಿರೆ ಲೋಪವಲ? - ಮಂಕುತಿಮ್ಮ ॥ ೫೪೮ ॥
puruSha buddiye sAku varasiddhigendalla । paramEsha karuNeyu anavashyavendalla ॥ charaNa naDevanitu kaNNarivenitu dUra nIm । charisadire lOpavala - Mankutimma ॥ 548 ॥
ಜಗತ್ಸೃಷ್ಟಿಯ ಕರ್ತೃವನ್ನು ಅರಿಯಲು ನಮ್ಮ ಬುದ್ಧಿಯಷ್ಟೆ ಸಾಕು ಎಂದುಕೊಳ್ಳಲಾಗುವುದಿಲ್ಲ ಅಥವಾ ಆ ಪರಮೇಶ್ವರನ ಕೃಪೆಯ ಅವಶ್ಯಕತೆ ಇಲ್ಲವೆಂದು ಅಂದುಕೊಳ್ಳಲಾಗುವುದಿಲ್ಲ. ದೇಹದಲ್ಲಿ ಶಕ್ತಿಯಿರುವಷ್ಟು ಮತ್ತು ವಸ್ತು ವಿಷಯಗಳನ್ನು ನಮ್ಮ ದೃಷ್ಟಿಯಿಂದ ಎಷ್ಟು ಅರ್ಥಮಾಡಿಕೊಳ್ಳಲಾಗುವುದೋ ಅಷ್ಟನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡದಿದ್ದರೆ, ಅದು ನಮ್ಮ ಕರ್ತವ್ಯದಲ್ಲಿ ಲೋಪವಾಗುತ್ತದೆ ಎಂದು ಪುರುಷ ಪ್ರಯತ್ನ ಮತ್ತು ಪರಮಾತ್ಮನ ಕೃಪೆಗಳ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
It is not that man can achieve everything on his own efforts. It is also not true that we would not need any divine help. But, we must go as long as our legs are strong and vision is clear. Only beyond that, we should let Providence take control. If we do not the efforts we are capable of, then it is us who lack - not Fate. - Mankutimma
Video Coming Soon
Detailed video explanations by scholars and experts will be available soon.