Mankutimmana Kagga by D.V. Gundappa
ಮತಿ ನಯನದಂತೆ ಮುಂದಿರ್ಪುದನು ನೋಡುವುದು । ಮಿತವದರ ಕೆಲಸ, ಹೆಳವನ ಚಲನೆಯಂತೆ ॥ ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ । ಮತಿಬಿಟ್ಟ ಮನ ಕುರುಡು - ಮಂಕುತಿಮ್ಮ ॥ ೫೪೭ ॥
mati nayanadante mundirpudanu nODuvudu । mitavadara kelasa, heLavana chalaneyante ॥ gati shaktiyadake manavemba charaNada balade । matibiTTa mana kuruDu - Mankutimma ॥ 547 ॥
ನಮ್ಮ ಬುದ್ಧಿಯು ಕಣ್ಣುಗಳ ಮೂಲಕ ಮುಂದಿರುವುದನ್ನು ನೋಡುತ್ತದೆ. ಕುಂಟನ ಚಲನೆಯಂತೆ ಬುದ್ಧಿಯ ಕೆಲಸವೂ ಮಿತವಾದದ್ದು. ಮನಸ್ಸೇ ಅದಕ್ಕೆ ಕಾಲು. ಮನಸ್ಸಿನ ಶಕ್ತಿಯಿಂದಲೇ ಬುದ್ಧಿಯೂ ನಡೆಯುತ್ತದೆ. ಆದರೆ ಬುದ್ಧಿಯ ಬಲವಿಲ್ಲದ ಮನಸ್ಸು ಕೇವಲ ಕುರುಡು ಎಂದು ಮನಸ್ಸು ಬುದ್ಧಿಗಳ ಪರಸ್ಪರ ಸಂಬಂಧವನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ.
Wisdom (or intellect) is like our eyes. It can only see forward but can not move. It's abilities are as limited as the movements of a cripple. It rides on the legs of the mind and makes things possible. Hence for proper functioning in life, we need intellect that rides well on a sound mind. A mind that leaves the intellect behind is blind and is severely limitted. - Mankutimma
Video Coming Soon
Detailed video explanations by scholars and experts will be available soon.