Back to List

Kagga 546 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶೀಯನಾಯುವ ಬಲವ ಜಯವ ಬೇಡಿರ್ದೊಡಂ । ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ॥ ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು । ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ॥ ೫೪೬ ॥

shrIyanAyuva balava jayava bEdirdoDam । gAyatriyane paramamantravendu aaryar ॥ dhIyam prachOdisendu anudinadi bEDidaru । shreyassu dhI mahime - Mankutimma ॥ 546 ॥

Meaning in Kannada

ಶ್ರೇಯಸ್ಸನ್ನು ಬಯಸಿ ಅದರಿಂದ ಬಲವನ್ನು ಮತ್ತು ಯಶಸ್ಸನ್ನು ಬೇಡುವುದಕ್ಕೆ ‘ಗಾಯತ್ರಿ’ಮಂತ್ರವನ್ನೇ ಪರಮೋಚ್ಚ ಮಂತ್ರವೆಂದು ಕಂಡುಕೊಂಡ ನಮ್ಮ ಸನಾತನದ ಪೂರ್ವಜರು, ನಮ್ಮ ಬುದ್ಧಿ ತೀಕ್ಷ್ನಗೊಳ್ಳಲಿ, ಮತ್ತಷ್ಟು ಮೊನಚಾಗಲಿ, ಎಂದು ಪ್ರತಿನಿತ್ಯವೂ ಬೇಡಿದರು. ಏಕೆಂದರೆ ಧೀ ಎಂದರೆ ಉತ್ತಮ ಬುದ್ಧಿಮತ್ತೆಯೇ ಮನುಷ್ಯನ ಶ್ರೇಯಸ್ಸಿಗೆ ದಾರಿ ಎಂದು ‘ಧೀ’ ಮಹಿಮೆಯನ್ನು ಈ ಮುಕ್ತಕದಲ್ಲಿ ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

The ancient people prayed for wealth, longevity, strength and victory. But of all the hymns, they consider Gayatri Mantra to be most sacred. In that, they pray only for their intellect to be provoked. The practice is to chant this daily to keep the mind fresh and rejuvenated. All other forms of well being will follow the well being of the mind. - Mankutimma

Themes

Society

Video Section

Video Coming Soon

Detailed video explanations by scholars and experts will be available soon.