Back to List

Kagga 539 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬರಿಯ ಬುದ್ಧಿವಿಮರ್ಶೆಗರಿದು ಜೀವನತತ್ತ್ವ । ಪರಿಶೋಧಿಸುವರಾರು ಬುದ್ಧಿಋಜುತೆಯನು? ॥ ಸ್ಫುರಿಸುವುದದೆಂದೊ ತಾನೇ ಮಿಂಚುಬಳ್ಳಿವೊಲು । ಪರತತ್ತ್ವ ಮನದೊಳಗೆ - ಮಂಕುತಿಮ್ಮ ॥ ೫೩೯ ॥

bariya buddhi vimarshegaridu jIvana tattva । parishOdhisuvarAru buddhi Rujuteyanu? ॥ sphurisuvudu adendo tAnE minchubaLLivolu । parattva manadoLage - Mankutimma ॥ 539 ॥

Meaning in Kannada

ಕೇವಲ ಬುದ್ಧಿಯ ತರ್ಕಕ್ಕೆ ಸಿಗುವುದಿಲ್ಲ ಜೀವನದ ಸತ್ವ. ಬುದ್ಧಿಯ ಪ್ರಾಮಾಣಿಕತೆಯನ್ನು ಪರಿಶೋಧಿಸುವವರಾರು? ಪ್ರತಿಯೊಬ್ಬನಿಗೂ ಆ ಪರತತ್ವವು ಮತ್ತು ಆ ಪರತತ್ವದ ಸತ್ವವು ಎಂದೋ ಒಂದು ದಿನ ತಾನೇ ತಾನಾಗಿ ಒಂದು ಮಿಚ ಬಳ್ಳಿಯಂತೆ ಸ್ಫುರಿಸುವುದು ಎಂದು ಒಂದು ಅದ್ಭುತ ಸತ್ಯವನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Can we search for the realization of cosmic spirit be achieved just be mental calculations - logic? How can we be certain of the purity of mind? (not being corrupted by temptations of senses) The realization will appear to the mind by itself (through experiences) like a lightening in the sky. - Mankutimma

Themes

LifeNatureSelf

Video Section

Video Coming Soon

Detailed video explanations by scholars and experts will be available soon.