Mankutimmana Kagga by D.V. Gundappa
ತನ್ನ ಬೆವರಿನ ಕೊಳದಿ ತಾಂ ಮುಳುಗಿ ತೇಲುತ್ತೆ । ಧನ್ಯನಾನೆನ್ನುವನದೊರ್ವ ಸ್ವತಂತ್ರನ್ ॥ ಪುಣ್ಯತೀರ್ಥದೊಳಿಳಿದು ಕರಗಲ್ ಸ್ವತಂತ್ರ ತಾನ್ । ಎನ್ನುವವನಿನ್ನೊರ್ವ - ಮಂಕುತಿಮ್ಮ ॥ ೫೩೮ ॥
tanna bevarina koLadi tAm muLugi tElutte । dhanya nAnu ennuvanu orva svatantran ॥ puNya tIrthadoLu iLidu karagal svatantra tAn । ennuvanu innorva - Mankutimma ॥ 538 ॥
ತನ್ನ ದುಡಿಮೆಯನ್ನು ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿಯೇ ಮಾಡುತ್ತಾ ತನ್ನ ಕಷ್ಟ ಸುಖಗಳ ಸುಳಿಯಲ್ಲೇ ತಾನೇ ಮುಳುಗಿ ತೇಲುತ್ತಾ ತನ್ನ ಜೀವನ ಸಾರ್ಥವಾಯಿತು ಎಂದು ನೆನೆಯುವ ಒಬ್ಬನಾದರೆ ತನ್ನ ಕುಟುಂಬವನ್ನು ಪಾಲಿಸುತ್ತಾ ಈ ಜಗತ್ತೇ ಒಂದು ಕುಟುಂಬ ಅಥವಾ ಪುಣ್ಯಕ್ಷೇತ್ರ ಅಥವಾ ಪುಣ್ಯತೀರ್ಥ ಎಂದು ಸಮಾಜಾಭಿಮುಖಿಯಾಗಿ ತನ್ನ ಹೆಸರನ್ನೂ ಉಳಿಸದೆ ಕರಗಿಹೋಗುವವನು ಮತ್ತೊಬ್ಬ. ಹೀಗೆ ಜಗತ್ತಿನಲ್ಲಿ ಇರುವ ನಾನಾ ರೀತಿಯ ಜನಗಳ ವಿಶ್ಲೇಷಣೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
People find their own ways to feel free. Some do it by hard work relishing in their own sweat - satisfied by the fact that they are the masters of their own fate. Some others take a dip in the holy waters and feel free - satisfied that their fate completely rests in the hands of the all powerful God that they believe in. - Mankutimma
Video Coming Soon
Detailed video explanations by scholars and experts will be available soon.