Back to List

Kagga 540 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನರವಿವೇಕವದೇನು ಬರಿಯ ಮಳೆ ನೀರಲ್ಲ । ಕೆರೆಯನೀರ್ ಊರ ಮೈಸೋಂಕುಗಳ ಬೆರಕೆ ॥ ಧರೆಯ ರಸವಾಸನೆಗಳಾಗಸದ ನಿರ್ಮಲದ । ವರವ ಕದಡಾಗಿಪುವು - ಮಂಕುತಿಮ್ಮ ॥ ೫೪೦ ॥

nara vivEkavadEnu bariya maLe nIralla । kereya nIr Ura maisOnkugaLa berake ॥ dhareya rasavAsanegaLu Agasada nirmalada । varava kadaDAgipuvu - Mankutimma ॥ 540 ॥

Meaning in Kannada

ಮನುಷ್ಯನ ವಿವೇಕವು ಮಳೆಯ ನೀರಿನಂತೆ ಶುದ್ಧವಲ್ಲ. ಕೆರೆಯ ನೀರಲ್ಲಿ ಊರ ಜನರ ಮೈಲಿಗೆಯಲ್ಲ ಕಲೆತಂತೆ. ಪರಮಾತ್ಮನ ವರದಂತೆ ಧರೆಗಿಳಿದ ನಿರ್ಮಲ ವರ್ಷಧಾರೆ ಭೂ ಸ್ಪರ್ಶವಾದೊಡನೆ ಭೂಮಿಯ ಮೇಲಿನ ರಸ ಮತ್ತು ಗಂಧಗಳ ಸಂಪರ್ಕದಿಂದ ಮಲಿನವಾಗುವಂತೆ, ಮನುಷ್ಯನ ವಿವೇಕವೂ ಸಹ ಇಲ್ಲಿನ ರಸ ವಾಸನೆಗಳ ಪರಿಣಾಮಗಳಿಂದ ತನ್ನ ಶುದ್ಧತೆಯನ್ನು ಉಳಿಸಿಕೊಳ್ಳಲಾಗದೆ ಮಲಿನವಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

A man's intellect is not pure like the rain water. It is more like the water of the lake that has impurities from washing the bodies of all the villagers. The purity from the skies is dirtied by the everyday life on the earth. - Mankutimma

Themes

LifeDeathNature

Video Section

Video Coming Soon

Detailed video explanations by scholars and experts will be available soon.