Mankutimmana Kagga by D.V. Gundappa
ಎಸಳಿನಡಿ, ಗಿಡದ ಬಿಗಿ, ಮೇಲೆ ಗಾಳಿಯ ಸರಸ । ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ ॥ ಕುಶಲ ಸೌರಭವ ನಿರ್ಯತ್ನ ಸ್ವತಂತ್ರದಿಂ । ಪಸರಿಪಾ ನಯ ಸುಖವೊ - ಮಂಕುತಿಮ್ಮ ॥ ೫೩೬ ॥
esaLinaDi, giDada bigi, mEle gALiya sarasa । kusumada kShEmavu aa bigita biDutegaLim ॥ kushala sourabhava niryatna svatantradim । pasaripA naya sukhavo - Mankutimma ॥ 536 ॥
ಹೂವಿನ ಎಸಳುಗಳನ್ನು ತೊಟ್ಟಿನ ಮೂಲಕ ಗಿಡವು ಬಿಗಿಯಾಗಿ ಹಿಡಿದುಕೊಂಡು ಇರುತ್ತದೆ. ಹೀಗೆ ಹೂವಿನ ಕ್ಷೇಮಕ್ಕಾಗಿ ಗಿಡದ ಭದ್ರಹಿಡಿತಕ್ಕೆ ಒಳಪಟ್ಟ ಹೂವಿನ ಮೇಲೆ ಗಾಳಿ ಸರಸವಾಡುತ್ತದೆ ಮತ್ತು ಹೂವು ಗಿಡದ ಹೊರಗಿದ್ದರೂ ಅದರ ಹಿಡಿದಲ್ಲಿದ್ದುಕೊಂಡೆ ತನ್ನ ಸೌರಭವನ್ನು ಅಪ್ರಯತ್ನವಾಗಿ ಹೊರಸೂಸುವುದು ಸುಖ. ನಮ್ಮ ಬದುಕೂ ಹಾಗೆಯೇ ನಮ್ಮ ಮಿತಿಗಳ ಬಿಗಿ ಹಿಡಿತದಲ್ಲಿ ಇದ್ದುಕೊಂಡೇ ಒಳಿತನ್ನು ಪಸರಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಒಂದು ಆಶಯವನ್ನು ಮಾನ್ಯ ಗುಂಡಪ್ಪನವರು ವ್ಯಕ್ತಪಡಿಸಿದ್ದಾರೆ ಈ ಮುಕ್ತಕದಲ್ಲಿ.
The petals of flower are held securely to the stalk below. On top, wind plays with it. The flower has to maintain the balance between getting stuck to the stack and sending its fragrance to the wind. It does this freely without any effort. Life is happy if we can find such balance. - Mankutimma
Video Coming Soon
Detailed video explanations by scholars and experts will be available soon.