Back to List

Kagga 534 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್ । ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ॥ ನರನ ಸ್ವತಂತ್ರಗತಿಯಂತು ಹಿತಮಿತವಿರಲು । ಅರಸೊ ಮಿತಿಯಾಯತಿಯ - ಮಂಕುತಿಮ್ಮ ॥ ೫೩೪ ॥

haraDuvudu sAja vAyuge saisadadu taDeyan । uruLipudu adellavanu taDegaLilladire ॥ narana svatantragatiyantu hitamitaviralu । araso mitiya Ayatiya - Mankutimma ॥ 534 ॥

Meaning in Kannada

ವಿಶಾಲವಾಗಿ ಹರಡಿಕೊಳ್ಳುವುದು ಗಾಳಿಗೆ ಸಹಜ ಗುಣ. ಅದರ ಹರಡುವಿಕೆಗೆ ಅಡ್ಡಿಗಳನ್ನು ಅದು ಸಹಿಸುವುದಿಲ್ಲ. ಹಾಗೆ ತನಗೆ ಅಡ್ಡಿಯಾಗಿ ಬಂದದ್ದನ್ನೆಲ್ಲಾ ಉರುಳಿಸಿ ತಳ್ಳಿಬಿಡುತ್ತದೆ. ಬದುಕಿನ ಗತಿಗೆ ಅಡೆ ತಡೆಗಳಿಲ್ಲದಿದ್ದರೆ ಮನುಷ್ಯನ ಬದುಕಿನ ಗತಿಯೂ ಸಹ ಗಾಳಿಯಂತೆಯೇ ಸಿಕ್ಕ ಸಿಕ್ಕದ್ದನ್ನೆಲ್ಲಾ ಉರುಳಿಸಿಕೊಂಡು ಹೋಗುವಂತಾಗುತ್ತದೆ. ಮಿತಿಯಿರಲು ಬದುಕು ಹಿತ. ಹಾಗಾಗಿ ನೀನು ನಿನ್ನ ಬದುಕಿನ ವೈಶಾಲ್ಯತೆಯ ಮಿತಿಯನ್ನು ಅರಿತುಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

It is the nature of wind to spread. It does not like obstacles. If it has freedom, it will bring down everything (obstacles) in this world. But it exxercises restraint and feels pleasant. Man's freedom is also similar. It is pleasant when restrained. We should hence search and realize our boundaries and exercise our freedom only with in that. - Mankutimma

Themes

WisdomLifeNaturePeace

Video Section

Video Coming Soon

Detailed video explanations by scholars and experts will be available soon.