Mankutimmana Kagga by D.V. Gundappa
ಪುರುಷಂ ಸ್ವತಂತ್ರನೋ? ದೈವವಿಧಿ ಪರವಶನೊ? । ಎರಡುಮನಿತಿನಿತುಳ್ಳ ತೋಳಿನಂತಿಹನೋ? ॥ ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ । ನರನಂತು ಮಿತಶಕ್ತ - ಮಂಕುತಿಮ್ಮ ॥ ೫೩೩ ॥
puruSham svatantranO? daivavidhi paravashano? । eraDum anitu initu uLLa tOLinantihanO? ॥ tiruguvudu maDisuvudu tOL maiya kaTTinali । naranu antu mitashakta - Mankutimma ॥ 533 ॥
"ಮನುಷ್ಯ ಸಂಪೂರ್ಣ ಸ್ವತಂತ್ರನೋ ಅಥವಾ ಅವನು ದೈವ ಮತ್ತು ತನ್ನ ಪೂರ್ವ ಕರ್ಮಗಳಿಗೆ ಅಧೀನನೋ? ಅಥವಾ ಸ್ವಾತಂತ್ರ ಮತ್ತು ತನ್ನಿಚ್ಛೆ ಎರಡೂ ಅಲ್ಪ ಸ್ವಲ್ಪ ಇರುವವನೋ?" ಎಂದು ಪ್ರಶ್ನಿಸುತ್ತಾ ಹೇಗೆ ನಮ್ಮ ಮೈಕಟ್ಟಿನ ಮಿತಿಯೊಳಗೆ ನಮ್ಮ ತೋಳಿಗೆ ತಿರುಗಿಸಲು,ಮಡಿಸಲು ತಿರುಗಿಸಲು ಸ್ವಾತಂತ್ರವಿದೆಯೋ ಹಾಗೆಯೇ ನಮಗೂ ನಮ್ಮ ಸ್ವ ಶಕ್ತಿಯ ಮತ್ತು ನಾವು ಪಡೆದುಕೊಂಡು ಬಂದ ವಿಧಿಯ ಮಿತಿಯೊಳಗೆ ‘ನಡೆದು’ಕೊಳ್ಳಲಾಗುತ್ತದೆ, ಎಂದು ಮನುಷ್ಯನ ಇತಿ ಮಿತಿಗಳ ಒಂದು ವಿಶ್ಲೇಷಣೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Is man independent? Or is he always under the control of Providence? Both of them are true to some extent. He is as free as his arms are. They can swing and fold by their wish - but even when they do, they have to follow the body structure. Man's power is also limited thus to the outline that Providence provides. - Mankutimma
Video Coming Soon
Detailed video explanations by scholars and experts will be available soon.